ಕೇಂದ್ರ ಸರ್ಕಾರ ಈ ಹಿಂದೆ ‘ಬೇಟಿ ಬಚಾವೋ ಬೇಟಿ ಪಡಾವೋ’ ಜಾಗೃತಿ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದು ಇದರ ಅಂಗವಾಗಿ ರಾಜ್ಯದ ಬೀದರ್ ನಗರದಲ್ಲಿ ಮೊದಲ ‘ಹೆಣ್ಣು ಮಗು ವೃತ್ತ’ ಉದ್ಘಾಟನೆಯಾಗಿದೆ.
ತಾಯಿ, ಹೆಣ್ಣು ಮಗುವನ್ನು ಎತ್ತಿಕೊಂಡಿರುವ ಪುತ್ಥಳಿಯನ್ನು ಈ ವೃತ್ತದಲ್ಲಿ ಸ್ಥಾಪಿಸಲಾಗಿದ್ದು, ಈ ಮೂಲಕ ಹೆಣ್ಣು ಮಗುವಿನ ಮೇಲೆ ಪ್ರತಿಯೊಬ್ಬರು ಅಭಿಮಾನ ಹೊಂದಿರಬೇಕು ಎಂಬ ಸಂದೇಶವನ್ನು ಸಾರಲಾಗುತ್ತಿದೆ.
BIG NEWS: ಎಲ್ಐಸಿಯಿಂದ ಮಹಿಳೆ ಹಾಗೂ ಪುರುಷರಿಗಾಗಿ ವಿಶಿಷ್ಟ ಪಾಲಿಸಿ
ಅಲ್ಲದೆ ಈ ವೃತ್ತದ ಸುತ್ತಲೂ ‘ಹೆಣ್ಣು ಮಗುವನ್ನು ಉಳಿಸಿ – ಹೆಣ್ಣು ಮಗುವನ್ನು ಓದಿಸಿ’ ಎಂಬ ಸಂದೇಶವನ್ನು ಬರೆಸಲಾಗಿದೆ. ಬೇಟಿ ಸರ್ಕಲ್ ಎಂದು ಕರೆಯಲಾಗುವ ಈ ವೃತ್ತವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಕಾರದೊಂದಿಗೆ ನಗರಸಭೆ ನಿರ್ಮಿಸಿದೆ.