alex Certify ಮಾಸ್ಕ್ ಧರಿಸದ ತಹಸೀಲ್ದಾರ್ ಗೆ ದಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಸ್ಕ್ ಧರಿಸದ ತಹಸೀಲ್ದಾರ್ ಗೆ ದಂಡ

ಶಿವಮೊಗ್ಗ: ಮಹಾನಗರ ಪಾಲಿಕೆ ಅಧಿಕಾರಿಗಳು ಮಾಸ್ಕ್ ಧರಿಸದ ಕಾರಣಕ್ಕೆ ಹೊಸನಗರ ತಹಸೀಲ್ದಾರ್ ಮತ್ತು ಪ್ರಥಮ ದರ್ಜೆ ಸಹಾಯಕರಿಗೆ ದಂಡ ವಿಧಿಸಿದ್ದಾರೆ.

ಹೊಸನಗರ ತಹಸೀಲ್ದಾರ್, ಪ್ರಥಮ ದರ್ಜೆ ಸಹಾಯಕರೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಇಬ್ಬರೂ ಮಾಸ್ಕ್ ಧರಿಸಿರಲಿಲ್ಲವೆನ್ನಲಾಗಿದೆ. ಶಿವಮೊಗ್ಗ ಸಾಗರ ರಸ್ತೆಯ ಆಲ್ಕೊಳ ವೃತ್ತದಲ್ಲಿ ಮಹಾನಗರಪಾಲಿಕೆ ಆರೋಗ್ಯ ನಿರೀಕ್ಷಕ ಕೃಷ್ಣಮೂರ್ತಿ ನೇತೃತ್ವದಲ್ಲಿ ಮಾಸ್ಕ್ ಹಾಕಿಕೊಳ್ಳದೆ ಓಡಾಡುತ್ತಿದ್ದವರಿಗೆ ದಂಡ ಹಾಕಲಾಗಿದೆ.

ಇದೇ ವೇಳೆ ಮಾಸ್ಕ್ ಧರಿಸದೆ ತಹಸೀಲ್ದಾರ್ ತೆರಳುತ್ತಿರುವುದನ್ನು ಗಮನಿಸಿದ ಪಾಲಿಕೆ ಅಧಿಕಾರಿಗಳು ತಲಾ 200 ರೂಪಾಯಿ ದಂಡ ಹಾಕಿದ್ದಾರೆ. ನಂತರದಲ್ಲಿ ಅವರಿಗೆ ತಾವು ದಂಡ ಹಾಕಿರುವುದು ಹೊಸನಗರ ತಹಸೀಲ್ದಾರ್ ಅವರಿಗೆ ಎಂಬುದು ಗೊತ್ತಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...