ಕಾರವಾರ: ವೀಕೆಂಡ್ ಪ್ರವಾಸಕ್ಕಾಗಿ ಬೆಂಗಳೂರಿನಿಂದ ಮುರ್ಡೇಶ್ವರಕ್ಕೆ ಬಂದಿದ್ದ ಕುಟುಂಬವೊಂದು ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿ ಮುಳುಗುವ ಭೀತಿಯಲ್ಲಿದ್ದಾಗ ರಕ್ಷಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುರ್ಡೇಶ್ವರದಲ್ಲಿ ಬೆಳಕಿಗೆ ಬಂದಿದೆ.
ಕಮಲಮ್ಮ (40), ಸಂಜಯ್ (18), ಸಂಜನಾ (15) ಬಚಾವಾದ ಒಂದೇ ಕುಟುಂಬದ ಸದಸ್ಯರು. ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರನ್ನು ಗಮನಿಸಿದ ಓಷನ್ ಅಡ್ವಂಚರ್ ತಂಡ ರಕ್ಷಣೆ ಮಾಡಿದೆ.
ಗ್ರಾಹಕನ ದರ್ಪಕ್ಕೆ ಕಣ್ಣೀರಿಟ್ಟ ಡೆಲಿವರಿ ಬಾಯ್..! ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್
ವಿಕೆಂಡ್ ಮಸ್ತಿಗಾಗಿ ಮುರ್ಡೇಶ್ವರಕ್ಕೆ ಬಂದಿದ್ದರು. ಈ ವೇಳೆ ಈಜಾಡಲೆಂದು ಸಮುದ್ರಕ್ಕೆ ಇಳಿದಿದ್ದಾರೆ. ಆದರೆ ಸಮುದ್ರದ ಅಲೆಯ ರಭಸಕ್ಕೆ ಸಿಲುಕಿ ಮೂವರೂ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದರು. ಅಷ್ಟರಲ್ಲಿ ಗಮನಿಸಿದ ಓಷನ್ ಅಡ್ವಂಚರ್ ನ ಇಬ್ಬರು ಸದಸ್ಯರು ಬೋಟ್ ಸಹಾಯದಿಂದ ಮೂವರನ್ನೂ ರಕ್ಷಿಸಿದ್ದಾರೆ.