alex Certify ಗ್ರಾಹಕನ ದರ್ಪಕ್ಕೆ ಕಣ್ಣೀರಿಟ್ಟ ಡೆಲಿವರಿ ಬಾಯ್​..! ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಹಕನ ದರ್ಪಕ್ಕೆ ಕಣ್ಣೀರಿಟ್ಟ ಡೆಲಿವರಿ ಬಾಯ್​..! ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್​

ಕೊರೊನಾ ಸಂಕಷ್ಟ, ಹವಾಮಾನ ವೈಪರೀತ್ಯ ಈ ಎಲ್ಲಾ ಸಮಸ್ಯೆಗಳ ನಡುವೆಯೂ ಡೆಲಿವರಿ ಬಾಯ್​​ಗಳು ತಮ್ಮ ಕಾರ್ಯವನ್ನ ಅಚ್ಚುಕಟ್ಟಾಗಿ ನಿಭಾಯಿಸ್ತಾ ಇದಾರೆ. ಸರಿಯಾದ ಸಮಯಕ್ಕೆ ಸರಿಯಾದ ಸ್ಥಳಕ್ಕೆ ಆರ್ಡರ್​ ತಲುಪಿಸೋದು ಅಂದರೆ ಸುಲಭದ ಮಾತಂತೂ ಅಲ್ಲವೇ ಅಲ್ಲ.

ಸೋಶಿಯಲ್​ ಮೀಡಿಯಾದಲ್ಲಿ ಡೆಲಿವರಿ ಬಾಯ್​ ಒಬ್ಬ ತನ್ನ ನೋವಿನ ಕತೆಯನ್ನ ಹೇಳಿಕೊಂಡಿದ್ದು ನೆಟ್ಟಿಗರ ಕಣ್ಣಂಚು ತೇವವಾಗಿದೆ. ರಿಲೇ ಎಲಿಯಾಟ್​ ಎಂಬಾತ ಗ್ರಾಹಕರಿಂದ ತನಗಾದ ನೋವಿನ ಬಗ್ಗೆ ಹೇಳಿಕೊಳ್ಳುತ್ತಾ ಭಾವುಕನಾಗಿದ್ದಾನೆ.

ಈ ವಿಡಿಯೋವನ್ನ ಮೊದಲು ಟಿಕ್​ಟಾಕ್​​ನಲ್ಲಿ ಶೇರ್ ಮಾಡಲಾಗಿದೆ. ನಾನು ಡೆಲಿವರಿ ನೀಡಲು 45 ನಿಮಿಷಗಳನ್ನ ವ್ಯಯಿಸಿದೆ. ಗ್ರಾಹಕ ಮನೆಯಿಂದ ಹೊರಬರಲು ನಿರಾಕರಿಸಿದ ಕಾರಣ ನಾನು ಪಾರ್ಕಿಂಗ್​ ಶುಲ್ಕವನ್ನೂ ಪಾವತಿ ಮಾಡಬೇಕಾಯ್ತು. ನನಗೆ ಆ ಗ್ರಾಹಕ 1.50 ಡಾಲರ್​ನ್ನು ಟಿಪ್ಸ್ ರೂಪದಲ್ಲಿ ನೀಡಿದ್ರು. ಊಬರ್​ ನನಗೆ 2.50 ಡಾಲರ್ ಹಣ ನೀಡಿತು. ಆದರೆ ನಾನು 3 ಡಾಲರ್​ ನ್ನು ಪಾರ್ಕಿಂಗ್​​ಗೆ ಖರ್ಚು ಮಾಡಿದ್ದೆ. ನನಗೆ ಬಾಡಿಗೆ ತುಂಬೋಕೂ ಸಾಧ್ಯವಾಗ್ತಿಲ್ಲ ಎಂದು ಆತ ಕಣ್ಣೀರು ಹಾಕಿದ್ದಾನೆ.

— Christian St. Croix (@SaintsCrossing) February 17, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...