alex Certify ಕಿಂಗ್ ಪಿನ್ ವಿಚಾರಣೆಯಲ್ಲಿ ಸ್ಪೋಟಕ ರಹಸ್ಯ ಬಯಲು: ಸ್ಟಾರ್ ನಟ, ಖ್ಯಾತ ನಟಿ, ರಿಯಾಲಿಟಿ ಶೋ ಸ್ಪರ್ಧಿಗೂ ಡ್ರಗ್ಸ್ ನಂಟು..? ಯಾರೆಲ್ಲ ಇದ್ದಾರೆ ಗೊತ್ತಾ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಿಂಗ್ ಪಿನ್ ವಿಚಾರಣೆಯಲ್ಲಿ ಸ್ಪೋಟಕ ರಹಸ್ಯ ಬಯಲು: ಸ್ಟಾರ್ ನಟ, ಖ್ಯಾತ ನಟಿ, ರಿಯಾಲಿಟಿ ಶೋ ಸ್ಪರ್ಧಿಗೂ ಡ್ರಗ್ಸ್ ನಂಟು..? ಯಾರೆಲ್ಲ ಇದ್ದಾರೆ ಗೊತ್ತಾ..?

ಬೆಂಗಳೂರು: ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ಘಟಕ(ಎನ್.ಸಿ.ಬಿ) ಅಧಿಕಾರಿಗಳು ರಾಜ್ಯದಲ್ಲಿ ನಡೆಸಿದ ದಾಳಿಯಿಂದ ಸ್ಯಾಂಡಲ್ವುಡ್ ನಲ್ಲಿ ಹಲವರಿಗೆ ಶಾಕ್ ಆಗಿದೆ.

ಖ್ಯಾತ ನಟ-ನಟಿಯರು, ರಿಯಾಲಿಟಿ ಶೋ ಸ್ಪರ್ಧಿ, ಸಂಗೀತ ನಿರ್ದೇಶಕರಿಗೂ ಡ್ರಗ್ಸ್ ನಂಟು ಇರುವುದು ಗೊತ್ತಾಗಿದೆ. ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ಘಟಕದ ಅಧಿಕಾರಿಗಳು ತನಿಖೆಯನ್ನು ಮುಂದುವರಿಸಿದ್ದಾರೆ.

ದಂಧೆಯ ಕಿಂಗ್ ಪಿನ್ ಅನಿಕಾ ವಿಚಾರಣೆ ವೇಳೆ ಹಲವು ಸ್ಪೋಟಕ ಮಾಹಿತಿ ಬಯಲಾಗಿದೆ. ಸೌತ್ ಇಂಡಿಯಾದ ಖ್ಯಾತ ಸಂಗೀತ ನಿರ್ದೇಶಕ ಡ್ರಗ್ಸ್ ನೊಂದಿಗೆ ನಂಟು ಹೊಂದಿರುವುದು ಗೊತ್ತಾಗಿದೆ. ವಿದೇಶದಲ್ಲಿಯೂ ಸಂಗೀತ ನಿರ್ದೇಶಕನ ಸ್ಟೇಜ್ ಶೋಗೆ ಭಾರಿ ಬೇಡಿಕೆ ಇದೆ. ಈತ ಕಿಂಗ್ ಪಿನ್ ಅನಿಕಾಳ ಡ್ರಗ್ಸ್ ಗ್ರಾಹಕನಾಗಿದ್ದಾನೆ.

ಪ್ರಭಾವಿಯೊಬ್ಬರ ಸಂಬಂಧಿಯಾಗಿರುವ ಕನ್ನಡದ ಸ್ಟಾರ್ ನಟ ಕೂಡ ಡ್ರಗ್ಸ್ ಜೊತೆಗೆ ನಂಟು ಹೊಂದಿದ್ದಾನೆ. ಅಲ್ಲದೆ, ಕನ್ನಡ, ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ನಟ ಕೂಡ ನಂಟು ಹೊಂದಿರುವುದು ಗೊತ್ತಾಗಿದೆ.

ಇನ್ನು ರಿಯಾಲಿಟಿ ಶೋ ಸ್ಪರ್ಧಿ ಮತ್ತು ಡ್ಯಾನ್ಸರ್ ಕೂಡ ಆಗಿರುವಾತ ಅನಿಕಾಳಿಂದ ಡ್ರಗ್ಸ್ ಪಡೆದುಕೊಳ್ಳುತ್ತಿ‌ದ್ದ ಗ್ರಾಹಕ ಎನ್ನುವುದು ಗೊತ್ತಾಗಿದೆ. ಟಿಕ್ ಟಾಕ್ ಮತ್ತು ಇನ್ ಸ್ಟಾಗ್ರಾಂನಲ್ಲಿ ಫೇಮಸ್ ಆಗಿರುವ ಡ್ಯಾನ್ಸರ್ ಕನ್ನಡದ ಜನಪ್ರಿಯ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದ.

ಮತ್ತೊಬ್ಬ ಪ್ರಮುಖ ಕಸ್ಟಮರ್ ಎಂದರೆ ಕನ್ನಡದ ಮೋಸ್ಟ್ ಕಾಂಟ್ರೋವರ್ಷಿಯಲ್ ನಟಿ. ತೆಲುಗು, ತಮಿಳು, ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ನಟಿ ಈಗ ಕನ್ನಡ ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಂಡಿದ್ದಾರೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...