alex Certify ರಾಜ್ಯದಲ್ಲಿ 8324 ಜನರಿಗೆ ಸೋಂಕು, ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಪಾಸಿಟಿವ್…? ಇಲ್ಲಿದೆ ಡಿಟೇಲ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದಲ್ಲಿ 8324 ಜನರಿಗೆ ಸೋಂಕು, ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಪಾಸಿಟಿವ್…? ಇಲ್ಲಿದೆ ಡಿಟೇಲ್ಸ್

ಬೆಂಗಳೂರು: ರಾಜ್ಯದಲ್ಲಿ ಇವತ್ತು 8324 ಜನರಿಗೆ ಕೊರೊನಾ ಸೋಂಕು ತಗುಲಿದೆ. ಒಟ್ಟು ಸೋಂಕಿತರ ಸಂಖ್ಯೆ 3,27,076 ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಇಂದು 8110 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು ಇದುವರೆಗೆ 2,35,128 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇವತ್ತು ಒಂದೇ ದಿನ 115 ಮಂದಿ ಮೃತಪಟ್ಟಿದ್ದು ಇದುವರೆಗೆ 5483 ಜನ ಸಾವನ್ನಪ್ಪಿದ್ದಾರೆ. 86,446 ಸಕ್ರಿಯ ಪ್ರಕರಣಗಳಿದ್ದು 721 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇವತ್ತು ಬಾಗಲಕೋಟೆ 152, ಬಳ್ಳಾರಿ 468, ಬೆಳಗಾವಿ 276, ಬೆಂಗಳೂರು ಗ್ರಾಮಾಂತರ 182, ಬೆಂಗಳೂರು ನಗರ 2993, ಬೀದರ್ 46, ಚಾಮರಾಜನಗರ 45, ಚಿಕ್ಕಬಳ್ಳಾಪುರ 102, ಚಿಕ್ಕಮಗಳೂರು 129, ಚಿತ್ರದುರ್ಗ 100, ದಕ್ಷಿಣಕನ್ನಡ 272, ದಾವಣಗೆರೆ 319, ಧಾರವಾಡ 290 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ.

ಗದಗ 181, ಹಾಸನ 325, ಹಾವೇರಿ 93, ಕಲ್ಬುರ್ಗಿ 173, ಕೊಡಗು 46, ಕೋಲಾರ 51, ಕೊಪ್ಪಳ 238, ಮಂಡ್ಯ 194, ಮೈಸೂರು 309, ರಾಯಚೂರು 186, ರಾಮನಗರ 153, ಶಿವಮೊಗ್ಗ 333, ತುಮಕೂರು 138, ಉಡುಪಿ 172, ಉತ್ತರಕನ್ನಡ 130, ವಿಜಯಪುರ 130, ಯಾದಗಿರಿ 98 ಜನರಿಗೆ ಪಾಸಿಟಿವ್ ವರದಿ ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...