alex Certify ಎಟಿಎಂನಲ್ಲಿ ನಡೆದ ಅಚ್ಚರಿಗೆ ಬೆರಗಾದ ಗ್ರಾಹಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಟಿಎಂನಲ್ಲಿ ನಡೆದ ಅಚ್ಚರಿಗೆ ಬೆರಗಾದ ಗ್ರಾಹಕ

ಧಾರವಾಡ: ಎಟಿಎಂನಲ್ಲೇ ತುಕ್ಕು ಹಿಡಿದಂತಾದ ನೋಟುಗಳು ಕಂಡು ಬಂದ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡ ನಗರದ ಕರ್ನಾಟಕ ವಿಶ್ವವಿದ್ಯಾಲಯ ಸಮೀಪದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂನಲ್ಲಿ ಗೌಸ್ ನವಲೂರ ಹಣ ಡ್ರಾ ಮಾಡಿದಾಗ ಇಂತಹ ನೋಟು ಕಂಡುಬಂದಿವೆ.

ಅವರು 10 ಸಾವಿರ ರೂಪಾಯಿ ಹಣ ಡ್ರಾ ಮಾಡಿದ್ದಾರೆ. ಸಾಮಾನ್ಯವಾಗಿ ಎಟಿಎಂಗಳಲ್ಲಿ ಉತ್ತಮವಾದ ನೋಟುಗಳು ಬರುತ್ತವೆ. ಆದರೆ, ತುಕ್ಕುಹಿಡಿದ ರೀತಿಯಲ್ಲಿರುವ 2000 ರೂ. ಮುಖಬೆಲೆಯ ನೋಟುಗಳು ಕಂಡುಬಂದಿದ್ದು ಇದರಿಂದ ಗೌಸ್ ನವಲೂರ ಪರದಾಟ ನಡೆಸುವಂತಾಗಿದೆ.

ನೋಟುಗಳ ಮೇಲೆ ತುಕ್ಕುಹಿಡಿದ ಕಲರ್ ಹತ್ತಿದ್ದು, ಇದರಿಂದಾಗಿ ಅವುಗಳನ್ನು ಯಾರೂ ಸ್ವೀಕರಿಸುತ್ತಿಲ್ಲ. ಇಂತಹ ನೋಟುಗಳನ್ನು ಎಟಿಎಂಗಳಲ್ಲಿ ಹಾಕುವಾಗ ಸಿಬ್ಬಂದಿ ಗಮನ ಹರಿಸಬೇಕು. ಇಲ್ಲದಿದ್ದರೆ ಇಂತಹ ನೋಟು ಪಡೆದ ಗ್ರಾಹಕರಿಗೆ ತೊಂದರೆ ಆಗುತ್ತದೆ ಎಂದು ಅವರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...