alex Certify ಮನೆಯಲ್ಲೇ ಮೃತದೇಹದೊಂದಿಗೆ 5 ದಿನ ಕಳೆದ ಸ್ನಾತಕೋತ್ತರ ಪದವೀಧರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲೇ ಮೃತದೇಹದೊಂದಿಗೆ 5 ದಿನ ಕಳೆದ ಸ್ನಾತಕೋತ್ತರ ಪದವೀಧರೆ

ಶಿವಮೊಗ್ಗ: ನಗರದ ಬಸವನಗುಡಿಯಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದು 5 ದಿನ ತಾಯಿ ಮೃತದೇಹದೊಂದಿಗೆ ಮಗಳು ಮನೆಯಲ್ಲಿಯೇ ಇದ್ದ ಘಟನೆ ಬೆಳಕಿಗೆ ಬಂದಿದೆ.

65 ವರ್ಷದ ನಿವೃತ್ತ ಶಿಕ್ಷಕಿ ಮೃತಪಟ್ಟವರು. ಅವರ ಪುತ್ರಿ ಸ್ನಾತಕೋತ್ತರ ಪದವೀಧರೆಯಾಗಿದ್ದು 5 ದಿನಗಳಿಂದ ಮನೆಯಲ್ಲಿಯೇ ತಾಯಿ ಮೃತದೇಹದೊಂದಿಗೆ ವಾಸವಾಗಿದ್ದಾಳೆ. ಮೃತ ದೇಹ ಕೊಳೆತು ವಾಸನೆ ಬಂದ ಕಾರಣ ಸ್ಥಳೀಯರು ಜಯನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ತಾಯಿ ಶವದೊಂದಿಗೆ ಮಗಳು 5 ದಿನ ಕಳೆದಿರುವುದು ಅನುಮಾನಕ್ಕೆ ಕಾರಣವಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪೊಲೀಸರು ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...