alex Certify ಕಿರುಕುಳ: ಅಪ್ರಾಪ್ತ ಪುತ್ರಿಯಿಂದಲೇ ಮೃತಪಟ್ಟ ತಂದೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಿರುಕುಳ: ಅಪ್ರಾಪ್ತ ಪುತ್ರಿಯಿಂದಲೇ ಮೃತಪಟ್ಟ ತಂದೆ

ಬೆಂಗಳೂರು: ಮದ್ಯ ಸೇವಿಸಿ ಮಕ್ಕಳಿಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯೊಬ್ಬ ಮಗಳಿಂದಲೇ ಸಾವಿಗೀಡಾಗಿದ್ದಾನೆ. 46 ವರ್ಷದ ಸಪ್ತಕ್ ಬ್ಯಾನರ್ಜಿ ಮೃತಪಟ್ಟ ವ್ಯಕ್ತಿ ಎಂದು ಹೇಳಲಾಗಿದೆ.

ಮೈಕೋಲೇಔಟ್ ನಿವಾಸಿಯಾಗಿರುವ ಸಪ್ತಕ್ ಪಶ್ಚಿಮ ಬಂಗಾಳ ಮೂಲದವರಾಗಿದ್ದು ಪತ್ನಿ ತೀರಿದ ನಂತರ ಪುತ್ರಿ ಹಾಗೂ ಪುತ್ರನೊಂದಿಗೆ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದರು. ಮಕ್ಕಳ ಪಾಲನೆಗಾಗಿ ಕೆಲಸ ಬಿಟ್ಟಿದ್ದ ಸಪ್ತಕ್ ಬಾಡಿಗೆ ಮನೆಯಿಂದ ಬರುತ್ತಿದ್ದ ಆದಾಯದಲ್ಲಿ ಜೀವನ ಸಾಗಿಸುತ್ತಿದ್ದರು.

ಮದ್ಯ ಸೇವಿಸುತ್ತಿದ್ದ ಸಪ್ತಕ್ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿರಲಿಲ್ಲ. ಸಂಬಂಧಿಕರೊಂದಿಗೂ ಬೆರೆಯಲು ಬಿಡುತ್ತಿರಲಿಲ್ಲ. ಬುಧವಾರ ರಾತ್ರಿ ಮದ್ಯ ಸೇವಿಸಿದ ಸಪ್ತಕ್ ಪಿಯಾನೋ ನುಡಿಸುವ ವಿಚಾರಕ್ಕೆ 15 ವರ್ಷದ ಪುತ್ರಿಯೊಂದಿಗೆ ಜಗಳವಾಡಿ ಕತ್ತರಿಯಿಂದ ಚುಚ್ಚಲು ಮುಂದಾಗಿದ್ದಾರೆ. ಮಗಳು ತಂದೆಯನ್ನು ನೂಕಿದಾಗ ಕತ್ತರಿ ಚುಚ್ಚಿ ಸಪ್ತಕ್ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಬಳಿಕ ಬಾಲಕಿ ಅಕ್ಕಪಕ್ಕದ ಮನೆಯವರಿಗೆ ಮಾಹಿತಿ ನೀಡಿದ್ದು ಅವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಮಕ್ಕಳನ್ನು ಮನೆಯಲ್ಲೇ ಇಟ್ಟುಕೊಂಡಿದ್ದ ಸಪ್ತಕ್ ಮನೆಯಲ್ಲಿ ಅಡುಗೆ ಮಾಡುತ್ತಿರಲಿಲ್ಲ. ಆನ್ಲೈನ್ ಮೂಲಕ ಊಟ ತರಿಸಿಕೊಳ್ಳುತ್ತಿದ್ದ. ಮಕ್ಕಳಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...