ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿ ಕೈಮೀರಿದೆ. ವೈದ್ಯಕೀಯ ಆಮ್ಲಜನಕದ ಸಿಗದೇ ಸೋಂಕಿತರ ಹಾಹಾಕಾರ ಮುಗಿಲು ಮುಟ್ಟಿದೆ. ಇತ್ತ ಲಸಿಕೆ ಕೊರತೆ, ಇನ್ನೊಂದೆಡೆ ರೆಮಿಡಿಸಿವರ್ ಅಭಾವ. ಇದೆಲ್ಲದರ ನಡುವೆ ಪ್ರಾಣವಾಯು ಕೂಡ ಸಿಗದೇ ರಾಜ್ಯದ ಜನತೆ ಒದ್ದಾಡಿ ಪ್ರಾಣ ಬಿಡ್ತಿದ್ದಾರೆ.
ರಾಜ್ಯದಲ್ಲಿ ಪರಿಸ್ಥಿತಿ ಕೈಮೀರಿ ಹೋಗುವವರೆಗೂ ಕೈಕಟ್ಟಿ ಕುಳಿತಿರುವ ಬಿಜೆಪಿ ಸರ್ಕಾರದ ವಿರುದ್ಧ ಸಂಸದ ಡಿ.ಕೆ. ಸುರೇಶ್ ಕೆಂಡಕಾರಿದ್ದಾರೆ. ಕೋವಿಡ್ ಸಾವನ್ನೂ ರಾಜ್ಯ ಸರ್ಕಾರ ಪ್ರಚಾರಕ್ಕೆ ಬಳಿಸಿಕೊಳ್ತಿದೆ.
ಆಮ್ಲಜನಕದ ಜೊತೆ ರೆಮಿಡಿಸಿವರ್ಗೂ ಅಭಾವ: ಮಹತ್ವದ ಸಭೆ ಕರೆದ ಸಿಎಂ
ರಾಜ್ಯದಲ್ಲಿ ಆಮ್ಲಜನಕದ ಕೊರತೆಯ ಬಗ್ಗೆ ನಾನು ವಾರದ ಮೊದಲೇ ಸಭೆಯಲ್ಲಿ ಹಾಗೂ ಪತ್ರದ ಮೂಲಕ ರಾಜ್ಯ ಸರ್ಕಾರವನ್ನೆ ಎಚ್ಚರಿಸಿದೆ. ಆದರೆ ಬಿಜೆಪಿ ನಾಯಕರು ಇದರಲ್ಲೂ ರಾಜಕೀಯ ಮಾಡಿದ್ದಾರೆ. ವಿರೋಧ ಪಕ್ಷದ ನಾಯಕರು ಹೇಳಿದ ಮಾತನ್ನ ಕಿವಿಗೊಡುವ ಗೋಜಿಗೇ ಸಚಿವರು ಹಾಗೂ ಸಿಎಂ ಹೋಗಲಿಲ್ಲ.ಇದರ ಪರಿಣಾಮವನ್ನ ಇಂದು ಜನರು ಎದುರಿಸುವಂರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.
ಸರ್ಕಾರಿ ಅಧಿಕಾರಿಗಳೂ ಸಹ ಇಂತಹ ವ್ಯವಸ್ಥೆಯ ಅಡಿಯಲ್ಲಿ ಕೆಲಸ ಮಾಡಿ ರೋಸಿ ಹೋಗಿದ್ದಾರೆ. ಅಧಿಕಾರಿಗಳ ಬೇಡಿಕೆಯನ್ನ ಸರ್ಕಾರ ಪೂರೈಸುತ್ತಿಲ್ಲ. ಹೀಗಾಗಿ ಅಧಿಕಾರಿಗಳೂ ಸರ್ಕಾರದ ಮಾತನ್ನ ಕೇಳ್ತಿಲ್ಲ. ಇಷ್ಟಾದ ಮೇಲೂ ಸರ್ಕಾರ ಎಚ್ಚೆತ್ತುಕೊಳ್ಳದೇ ಹೋದಿಲ್ಲ ರಾಜ್ಯಕ್ಕೆ ಇನ್ನೂ ದೊಡ್ಡ ಅಪಾಯ ಕಾದಿದೆ ಎಂದು ಸಂಸದ ಡಿ.ಕೆ ಸುರೇಶ್ ಎಚ್ಚರಿಸಿದ್ದಾರೆ.