alex Certify ಆಮ್ಲಜನಕದ ಜೊತೆ ರೆಮಿಡಿಸಿವರ್​ಗೂ ಅಭಾವ: ಮಹತ್ವದ ಸಭೆ ಕರೆದ ಸಿಎಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಮ್ಲಜನಕದ ಜೊತೆ ರೆಮಿಡಿಸಿವರ್​ಗೂ ಅಭಾವ: ಮಹತ್ವದ ಸಭೆ ಕರೆದ ಸಿಎಂ

ರಾಜ್ಯದಲ್ಲಿ ಕೋವಿಡ್​ ಪ್ರಕರಣಗಳು ದಿನದಿಂದ ದಿನಕ್ಕೆ ಮಿತಿಮೀರುತ್ತಲೇ ಇದೆ. ಉತ್ತರ ಪ್ರದೇಶ, ಮಹಾರಾಷ್ಟ್ರ, ದೆಹಲಿಯಲ್ಲಿ ಕೇಳಿ ಬರ್ತಿದ್ದ ಆಕ್ಸಿಜನ್​ ಹಾಗೂ ರೆಮಿಡಿಸಿವರ್​ ಕೊರತೆಯ ಪರಿಸ್ಥಿತಿ ಇದೀಗ ರಾಜ್ಯದಲ್ಲೂ ಉಂಟಾಗಿದೆ. ವೈದ್ಯಕೀಯ ಆಮ್ಲಜನಕದ ಕೊರತೆಯಿಂದಾಗಿ ಈಗಾಗಲೇ ಚಾಮರಾಜನಗರದಲ್ಲಿ 23, ಕಲಬುರಗಿಯಲ್ಲಿ 4 ಹಾಗೂ ಬೆಂಗಳೂರಿನಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.

ಕೇವಲ ವೈದ್ಯಕೀಯ ಆಮ್ಲಜನಕ ಮಾತ್ರವಲ್ಲದೇ ಕೊರೊನಾ ವಿರುದ್ಧದ ಚಿಕಿತ್ಸೆಯಲ್ಲಿ ಮಹತ್ವವಾಗಿ ಬಳಕೆಯಾಗಲ್ಪಡುವ ರೆಮಿಡಿಸಿವರ್​ ಚುಚ್ಚುಮದ್ದಿಗೂ ರಾಜ್ಯದಲ್ಲಿ ಅಭಾವ ಉಂಟಾಗಿದೆ.

ರಾಜ್ಯದಲ್ಲಿ ಉಂಟಾಗಿರುವ ಈ ಸಂಕಷ್ಟದ ಪರಿಸ್ಥಿತಿಯನ್ನ ಗಮನದಲ್ಲಿಟ್ಟುಕೊಂಡಿರುವ ಸಿಎಂ ಯಡಿಯೂರಪ್ಪ ಸಂಪುಟ ಸಭೆಗೂ ಮುನ್ನ ಮತ್ತೊಂದು ಸಭೆಯನ್ನ ನಡೆಸಲು ನಿರ್ಧರಿಸಿದ್ದಾರೆ. ಈ ಸಭೆಯಲ್ಲಿ ರಾಜ್ಯದಲ್ಲಿ ರೆಮಿಡಿಸಿವರ್​ ವಿತರಣೆ ಕುರಿತಂತೆ ಸಿಎಂ ಔಷಧಿ ಕಂಪನಿಗಳ ಮುಖ್ಯಸ್ಥರ ಜೊತೆ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.

ಮಧ್ಯಾಹ್ನ 1 ಗಂಟೆಗೆ ಕಾವೇರಿಯಲ್ಲಿ ನಡೆಯಲಿರುವ ಈ ಸಭೆಯಲ್ಲಿ ಸಿಎಂ ಯಡಿಯೂರಪ್ಪ ರಾಜ್ಯದಲ್ಲಿ ರೆಮಿಡಿಸಿವರ್ ಪೂರೈಕೆ ಕುರಿತಂತೆ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಅಲ್ಲದೇ ಈ ಸಂಬಂಧ ಕೇಂದ್ರ ಸರ್ಕಾರದ ಮೇಲೂ ರಾಜ್ಯದಿಂದ ಒತ್ತಡ ಹೇರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...