
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಿವಾಸದಲ್ಲಿ ಇರುವ ಮುದ್ದಿನ ಕರುಗಳ ಮೈದಡವದೇ ಅವರ ಬೆಳಗಿನ ವಾಕಿಂಗ್ ಪೂರ್ಣವಾಗುವುದಿಲ್ಲ. ಮನೆಯಲ್ಲಿರುವ ನಂದೀಶ ಮತ್ತು ಬಸವ ಹೆಸರಿನ ಕರುಗಳ ಕಂಡರೆ ಸಿಎಂಗೆ ಅಕ್ಕರೆ. ಇದನ್ನು ಅವರೇ ಹೇಳಿಕೊಂಡಿದ್ದಾರೆ.
ನನ್ನ ದಿನಚರಿ ಪ್ರಾರಂಭವಾಗುವುದೇ ಬೆಳಗಿನ ನಡಿಗೆಯ ಮೂಲಕ. ಆ ಸಮಯದಲ್ಲಿ ಎದುರಾಗುವ ಮುದ್ದಿನ ಕರುಗಳಾದ ನಂದೀಶ ಮತ್ತು ಬಸವಣ್ಣನ ಮೈದಡವದೇ ಅದು ಪೂರ್ಣವಾಗುವುದಿಲ್ಲ. ಮೂಕಪ್ರಾಣಿಗಳ ಪ್ರೀತಿ ಅಭಿವ್ಯಕ್ತಿ ಹೃದಯ ಮುಟ್ಟುತ್ತದೆ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.