ಬೆಂಗಳೂರು: ಬೀದರ್ ನಲ್ಲಿ ನಿನ್ನೆ 20 ಮಂದಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 370 ಕ್ಕೆ ಏರಿಕೆಯಾಗಿದೆ.
ನಿನ್ನೆ ಪತ್ತೆಯಾದ ಸೋಂಕಿತರೆಲ್ಲರೂ ಬಸವಕಲ್ಯಾಣ ಮತ್ತು ಔರಾದ್ ತಾಲೂಕಿನವರಾಗಿದ್ದು, ಮಹಾರಾಷ್ಟ್ರದಿಂದ ವಾಪಸ್ಸಾಗಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ ಮತ್ತೆ 9 ಜನರಿಗೆ ಕೊರೊನಾ ಸೋಂಕು ತಗಲಿದ್ದು ಇವರಲ್ಲಿ ಇಬ್ಬರು ಜಿಂದಾಲ್ ಉದ್ಯೋಗಿಗಳಾಗಿದ್ದಾರೆ. ಜಿಂದಾಲ್ ನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 106 ಕ್ಕೆ ಏರಿಕೆಯಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ 190 ಕ್ಕೆ ಏರಿಕೆಯಾಗಿದೆ.