alex Certify ಒಂದೇ ದಿನ 6317 ಜನರಿಗೆ ಕೊರೊನಾ, ಯಾವ ಜಿಲ್ಲೆಯಲ್ಲಿ ಎಷ್ಟು ಜನರಿಗೆ ಸೋಂಕು..? ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದೇ ದಿನ 6317 ಜನರಿಗೆ ಕೊರೊನಾ, ಯಾವ ಜಿಲ್ಲೆಯಲ್ಲಿ ಎಷ್ಟು ಜನರಿಗೆ ಸೋಂಕು..? ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ನಿನ್ನೆ 6317 ಜನರಿಗೆ ಕೊರೊನಾ ಸೋಂಕು ತಗಲಿದ್ದು ಒಟ್ಟು ಸೋಂಕಿತರ ಸಂಖ್ಯೆ 2,33,283 ಕ್ಕೆ ಏರಿಕೆಯಾಗಿದೆ.

ನಿನ್ನೆ ಒಂದೇ ದಿನ 7071 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು ಇದುವರೆಗೆ 1,48,562 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ನಿನ್ನೆ ಒಂದೇ ದಿನ 115 ಮಂದಿ ಮೃತಪಟ್ಟಿದ್ದು, ಇದರೊಂದಿಗೆ ಮೃತಪಟ್ಟವರ ಸಂಖ್ಯೆ 4062 ಕ್ಕೆ ಏರಿಕೆಯಾಗಿದೆ. 80,643 ಸಕ್ರಿಯ ಪ್ರಕರಣಗಳಿದ್ದು, 695 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ 2053, ಬಾಗಲಕೋಟೆ 164, ಬಳ್ಳಾರಿ 319, ಬೆಳಗಾವಿ 171, ಬೆಂಗಳೂರು ಗ್ರಾಮಾಂತರ 25, ಬೀದರ್ 72, ಚಾಮರಾಜನಗರ 61, ಚಿಕ್ಕಬಳ್ಳಾಪುರ 41 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ.

ಚಿಕ್ಕಮಗಳೂರು 92, ಚಿತ್ರದುರ್ಗ 21, ದಕ್ಷಿಣಕನ್ನಡ 144, ದಾವಣಗೆರೆ 165, ಧಾರವಾಡ 201, ಗದಗ 99, ಹಾಸನ 250, ಹಾವೇರಿ 43, ಕಲಬುರ್ಗಿ 211, ಕೊಡಗು 18, ಕೋಲಾರ 121, ಕೊಪ್ಪಳ 169, ಮಂಡ್ಯ 26, ಮೈಸೂರು 597, ರಾಯಚೂರು 110, ರಾಮನಗರ 85, ಶಿವಮೊಗ್ಗ 397, ತುಮಕೂರು 130, ಉಡುಪಿ 268, ಉತ್ತರಕನ್ನಡ 89, ವಿಜಯಪುರ 106, ಯಾದಗಿರಿ 69 ಜನರಿಗೆ ಕೊರೊನಾ ಸೋಂಕು ತಗುಲಿದೆ.

ಬೆಂಗಳೂರಿನಲ್ಲಿ 39, ಬೆಳಗಾವಿ 9, ಬಳ್ಳಾರಿ 6, ದಕ್ಷಿಣ ಕನ್ನಡ 8, ಹಾಸನ 9, ಕಲಬುರ್ಗಿ 7 ಮೈಸೂರು 5 ಜನ ಸೇರಿದಂತೆ ರಾಜ್ಯದಲ್ಲಿ ನಿನ್ನೆ ಒಂದೇ ದಿನ 115 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...