ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 69 ಮಂದಿಗೆ ಕೊರೋನಾ ಸೋಂಕು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 1056 ಕ್ಕೆ ಏರಿಕೆಯಾಗಿದೆ.
ಬೀದರ್ ನಲ್ಲಿ ಕೊರೋನಾ ಸೋಂಕಿನಿಂದ ಮತ್ತೊಬ್ಬರು ಸಾವನ್ನಪ್ಪಿದ್ದಾರೆ. ಇದುವರೆಗೆ ಇಬ್ಬರು ಸಾವನ್ನಪ್ಪಿದಂತಾಗಿದೆ. 1041ನೇ ಸೋಂಕಿತ 52 ವರ್ಷದ ವ್ಯಕ್ತಿ ಮೇ 12 ರಂದು ಸಾವನ್ನಪ್ಪಿದ್ದು ಇವತ್ತು ಅವರ ಮಾದರಿ ಪರೀಕ್ಷೆ ವರದಿಯಲ್ಲಿ ಕೊರೋನಾ ಪಾಸಿಟಿವ್ ಬಂದಿದೆ. ಇದರೊಂದಿಗೆ ರಾಜ್ಯದಲ್ಲಿ ಸಾವಿನ ಸಂಖ್ಯೆ 36 ಕ್ಕೆ ಏರಿಕೆಯಾಗಿದೆ.
ದಕ್ಷಿಣ ಕನ್ನಡ 16, ಮಂಡ್ಯ 13, ಬೆಂಗಳೂರು 13, ಹಾಸನ 7, ಬೀದರ್ 7, ಉಡುಪಿ 5, ಕಲಬುರಗಿ 3, ಕೋಲಾರ 1, ಚಿತ್ರದುರ್ಗ-2, ಶಿವಮೊಗ್ಗ 1, ಬಾಗಲಕೋಟೆ ಜಿಲ್ಲೆಯಲ್ಲಿ 1 ಪಾಸಿಟಿವ್ ಕೇಸ್ ಪತ್ತೆಯಾಗಿದೆ.