alex Certify ಕೊರೋನಾ ಎಫೆಕ್ಟ್: ವಿಧಾನಮಂಡಲ ಸಮಿತಿ ಸಭೆಗಳು ರದ್ದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೋನಾ ಎಫೆಕ್ಟ್: ವಿಧಾನಮಂಡಲ ಸಮಿತಿ ಸಭೆಗಳು ರದ್ದು

ಬೆಂಗಳೂರು: ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಶಾಸಕರ ಆರೋಗ್ಯದ ಹಿತದೃಷ್ಟಿಯಿಂದ ಕರ್ನಾಟಕ ವಿಧಾನಮಂಡಲ/ವಿಧಾನಸಭೆಯ ಎಲ್ಲ ಸಮಿತಿಗಳ ಸಭೆಯನ್ನು ಸಾಮಾಜಿಕ ಅಂತರ ಕಾಪಾಡಿಕೊಂಡು ಅಗತ್ಯವಿರುವ ಅಧಿಕಾರಿಗಳೊಂದಿಗೆ ನಡೆಸಲು ಎಲ್ಲಾ ಸಮಿತಿಯ ಅಧ್ಯಕ್ಷರುಗಳಿಗೆ ತಿಳಿಸಲಾಗಿದೆ.

ಆದರೂ ಕೊರೊನಾ ಸೋಂಕು ಹರಡುತ್ತಿರುವುದರಿಂದ ಮತ್ತು ಬೆಂಗಳೂರು ನಗರ ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್ಡೌನ್ ಘೋಷಣೆ ಮಾಡಿರುವುದರಿಂದ ಸಮಿತಿ ಸಭೆಗಳನ್ನು ಸ್ಥಗಿತಗೊಳಿಸಲಾಗಿದೆ.

ಮುಂದಿನ ಆದೇಶದವರೆಗೂ ವಿಧಾನಮಂಡಲ/ವಿಧಾನಸಭೆಯ ಎಲ್ಲ ಸಮಿತಿಗಳ ಸಭೆ ಸ್ಥಗಿತಗೊಳಿಸಲು ಸಭಾಧ್ಯಕ್ಷರು ಆದೇಶಿಸಿದ್ದಾರೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...