alex Certify ಆಗಸ್ಟ್ ನಲ್ಲಿ ಕಾದಿದ್ಯಾ ಗಂಡಾಂತರ..? 15 ದಿನದಲ್ಲಿ 1 ಲಕ್ಷ ಹೊಸ ಕೇಸ್ ಸಾಧ್ಯತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಗಸ್ಟ್ ನಲ್ಲಿ ಕಾದಿದ್ಯಾ ಗಂಡಾಂತರ..? 15 ದಿನದಲ್ಲಿ 1 ಲಕ್ಷ ಹೊಸ ಕೇಸ್ ಸಾಧ್ಯತೆ

ಬೆಂಗಳೂರು: 15 ದಿನದಲ್ಲಿ ರಾಜ್ಯದಲ್ಲಿ ಹೊಸದಾಗಿ ಒಂದು ಲಕ್ಷ ಸೋಂಕಿತರು ಪತ್ತೆಯಾಗುವ ಸಾಧ್ಯತೆ ಇದೆ. ತಜ್ಞರು ನೀಡಿರುವ ಅಭಿಪ್ರಾಯದಂತೆ ರಾಜ್ಯದಲ್ಲಿ ಬೇರೆ ರಾಜ್ಯಗಳಿಗಿಂತ ಕೊರೊನಾ ಪರಿಸ್ಥಿತಿ ಭಿನ್ನವಾಗಿರುವುದರಿಂದ 1 ಲಕ್ಷ  ಕೇಸುಗಳು ಪತ್ತೆಯಾಗಬಹುದೆಂದು ಹೇಳಲಾಗಿದೆ.

ಮಹಾರಾಷ್ಟ್ರ, ತಮಿಳುನಾಡು ನಂತರ ಕರ್ನಾಟಕದಲ್ಲಿ 50,000 ಸಕ್ರಿಯ ಪ್ರಕರಣಗಳು ಇವೆ. ಮಹಾರಾಷ್ಟ್ರ, ತಮಿಳುನಾಡಿಗಿಂತ ರಾಜ್ಯದ ಪರಿಸ್ಥಿತಿ ಭಿನ್ನವಾಗಿದೆ. ಮಹಾರಾಷ್ಟ್ರ, ತಮಿಳುನಾಡಿನಲ್ಲಿ 1 ಲಕ್ಷ ಗಡಿ ದಾಟಿದ ನಂತರದಲ್ಲಿ 50 ಸಾವಿರ ಪ್ರಕರಣಗಳು ಇದ್ದವು. ಆದರೆ ರಾಜ್ಯದಲ್ಲಿ 90,942 ಸೋಂಕಿತರು ಇರುವಾಗಲೇ 50 ಸಾವಿರಕ್ಕೂ ಅಧಿಕ ಸಕ್ರಿಯ ಪ್ರಕರಣಗಳು ಇವೆ.

ಜುಲೈ ಆರಂಭದಲ್ಲಿ ಉಂಟಾದ ಕೊರೊನಾ ಸ್ಫೋಟವೇ ಇದಕ್ಕೆಲ್ಲ ಕಾರಣವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರೀಕ್ಷೆಗೂ ಮೀರಿ ಕೊರೊನಾ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು ಆಗಸ್ಟ್ ನಲ್ಲಿ ಗಂಡಾಂತರ ಕಾದಿದೆ ಎಂಬ ಆತಂಕ ಶುರುವಾಗಿದೆ.

ಆದರೆ, ನಂಬರ್ ನೋಡಿ ಹೆದರಿಕೊಳ್ಳುವ ಅವಶ್ಯಕತೆ ಇಲ್ಲ. ಕೊರೊನಾ ಸಂಖ್ಯೆ ಹೆಚ್ಚಾಗಿದ್ದರೂ, ರಾಜ್ಯದಲ್ಲಿ ವೈದ್ಯಕೀಯ ಸೌಲಭ್ಯ ಹೆಚ್ಚಿಸಲಾಗುತ್ತಿದೆ. ಗಂಭೀರ ಸಮಸ್ಯೆ ಇರುವವರನ್ನು ಆಸ್ಪತ್ರೆಯಲ್ಲಿ ಉಳಿಸಿಕೊಂಡು ಲಕ್ಷಣ ರಹಿತ ಸೋಂಕಿತರನ್ನು ಆರೈಕೆ ಕೇಂದ್ರಗಳಲ್ಲಿ ಇರಿಸಲಾಗುವುದು. ಸೋಂಕಿತರ ಸಂಖ್ಯೆ ತೀವ್ರವಾಗಿ ಏರುತ್ತಿದ್ದರೂ, ರಾಜ್ಯದಲ್ಲಿ ಸಾವಿನ ಪ್ರಮಾಣ ಕಡಿಮೆ ಇದೆ. ಇದಕ್ಕೆ ಸರ್ಕಾರ, ತಜ್ಞರು, ಟಾಸ್ಕ್ ಫೋರ್ಸ್ ಕೈಗೊಂಡ ಪರಿಣಾಮಕಾರಿ ಕ್ರಮಗಳೇ ಕಾರಣ. ಕೊರೋನಾ ನಿಯಂತ್ರಣಕ್ಕೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...