alex Certify ಕೊರೋನಾ ತಡೆಗೆ ಮತ್ತೊಂದು ಹೆಜ್ಜೆ ಇಟ್ಟ ಸರ್ಕಾರದಿಂದ ಮಹತ್ವದ ಕ್ರಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೋನಾ ತಡೆಗೆ ಮತ್ತೊಂದು ಹೆಜ್ಜೆ ಇಟ್ಟ ಸರ್ಕಾರದಿಂದ ಮಹತ್ವದ ಕ್ರಮ

ಬೆಂಗಳೂರು: ಕೊರೋನಾ ಸೋಂಕಿತರನ್ನು ಪತ್ತೆ ಹಚ್ಚಲು ರಾಜ್ಯ ಸರ್ಕಾರದಿಂದ ಲ್ಯಾಬ್ ಟೆಸ್ಟ್ ಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

ರೋಗದ ಗುಣಲಕ್ಷಣಗಳು ಇರುವವರಿಗೆ ಕೂಡಲೇ ಪರೀಕ್ಷೆ ಮಾಡಬೇಕು. ಕಂಟೇನ್ಮೆಂಟ್ ಜೋನ್ ಹೊರತುಪಡಿಸಿ ಬೇರೆ ಪ್ರದೇಶಗಳಲ್ಲಿ ಸೋಂಕಿತರ ಸಂಪರ್ಕದಲ್ಲಿರುವ ಎಲ್ಲರಿಗೂ ಟೆಸ್ಟ್ ಅಗತ್ಯವಿಲ್ಲ. ಸೋಂಕಿನ ಗುಣಲಕ್ಷಣಗಳು ಇದ್ದರೆ ಮಾತ್ರ ತಕ್ಷಣ ಟೆಸ್ಟ್ ಗೆ ಕಳುಹಿಸಬೇಕು. ಗುಣಲಕ್ಷಣಗಳು ಇಲ್ಲದವರಿಗೆ ಒಮ್ಮೆ ಟೆಸ್ಟ್ ಮಾಡಬೇಕು. 5ರಿಂದ 10 ದಿನಗಳ ನಡುವೆ ಒಮ್ಮೆ ಟೆಸ್ಟ್ ಮಾಡಬೇಕು ಎಂದು ಸೂಚಿಸಲಾಗಿದೆ.

ಕೊರೋನಾ ಸೋಂಕಿನ ಗುಣಲಕ್ಷಣಗಳು ಇರುವ ಫ್ರಂಟ್ ಲೈನ್ ಆರೋಗ್ಯ ಸಿಬ್ಬಂದಿಗೆ ಕೂಡಲೇ ಟೆಸ್ಟ್ ಮಾಡಬೇಕು. ಗರ್ಭಿಣಿಯರಿಗೆ ಹೆರಿಗೆ ಸಮಯದ 14 ದಿನಗಳ ಮೊದಲು ಪರೀಕ್ಷೆ ನಡೆಸಬೇಕು. 14 ದಿನಗಳು ಇದ್ದಾಗ ಒಮ್ಮೆ ಗಂಟಲು ಟೆಸ್ಟ್ ಮಾಡಬೇಕು.

ರೋಗ ಲಕ್ಷಣ ಇರುವವರಿಗೆ ಟೆಸ್ಟ್ ಮಾಡಬೇಕು. ಗುಣಲಕ್ಷಣಗಳು ಇಲ್ಲದಿದ್ದರೆ ಟೆಸ್ಟ್ ಅಗತ್ಯವಿಲ್ಲ ಎಂದು ಕೊರೋನಾ ರೋಗಿಗಳನ್ನು ಪತ್ತೆಹಚ್ಚಲು ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...