alex Certify BIG NEWS: ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು…? ಇಲ್ಲಿದೆ ಜಿಲ್ಲಾವಾರು ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು…? ಇಲ್ಲಿದೆ ಜಿಲ್ಲಾವಾರು ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇವತ್ತು 8960 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 3,18,752 ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಇಂದು 7464 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಇದುವರೆಗೆ 2,27,018 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇವತ್ತು 136 ಜನ ಸೋಂಕಿತರು ಮೃತಪಟ್ಟಿದ್ದು ಇದುವರೆಗೆ 5368 ಜನ ಸಾವನ್ನಪ್ಪಿದ್ದಾರೆ. 86,347 ಸಕ್ರಿಯ ಪ್ರಕರಣಗಳಿದ್ದು 754 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಿಲ್ಲಾವಾರು ಸೋಂಕಿತರು:

ಇವತ್ತು ಬಾಗಲಕೋಟೆ 148, ಬಳ್ಳಾರಿ 484, ಬೆಳಗಾವಿ 290, ಬೆಂಗಳೂರು ಗ್ರಾಮಾಂತರ 214, ಬೆಂಗಳೂರು ನಗರ 2721, ಬೀದರ್ 60, ಚಾಮರಾಜನಗರ 37, ಚಿಕ್ಕಬಳ್ಳಾಪುರ 124, ಚಿಕ್ಕಮಗಳೂರು 136, ಚಿತ್ರದುರ್ಗ 150 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ.

ದಕ್ಷಿಣಕನ್ನಡ 448, ದಾವಣಗೆರೆ 379, ಧಾರವಾಡ 299, ಗದಗ 169, ಹಾಸನ 357, ಹಾವೇರಿ 132, ಕಲಬುರ್ಗಿ 222, ಕೊಡಗು 28, ಕೋಲಾರ 74, ಕೊಪ್ಪಳ 217, ಮಂಡ್ಯ 188, ಮೈಸೂರು 726, ರಾಯಚೂರು 178, ರಾಮನಗರ 87, ಶಿವಮೊಗ್ಗ 314, ತುಮಕೂರು 250, ಉಡುಪಿ 176, ಉತ್ತರಕನ್ನಡ 147, ವಿಜಯಪುರ 139, ಯಾದಗಿರಿ 66 ಜನರಿಗೆ ಕೊರೋನಾ ಸೋಂಕು ತಗುಲಿರುವ ವರದಿ ಬಂದಿದೆ.

ಸಾವಿನ ಸಂಖ್ಯೆ:

ಇವತ್ತು ಬೆಂಗಳೂರಿನಲ್ಲಿ 41, ಬಳ್ಳಾರಿ 5, ಬೆಳಗಾವಿ 4, ಚಿಕ್ಕಮಗಳೂರು 4, ದಕ್ಷಿಣಕನ್ನಡ 6, ದಾವಣಗೆರೆ 6, ಧಾರವಾಡ 9, ಮೈಸೂರು 17, ಶಿವಮೊಗ್ಗ 7, ತುಮಕೂರು 4, ವಿಜಯಪುರ ಜಿಲ್ಲೆಯಲ್ಲಿ 4 ಜನ ಸೇರಿದಂತೆ ರಾಜ್ಯದಲ್ಲಿ 136 ಜನ ಸೋಂಕಿತರು ಸಾವನ್ನಪ್ಪಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...