ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಕೊರೊನಾ ಲಸಿಕೆ ಬಗ್ಗೆ ಜನರಲ್ಲಿ ಭಯ ಕೂಡ ಇದೆ. ಲಸಿಕೆ ಹಾಕಿಸಿಕೊಳ್ಳುವ ಮೊದಲು ಕೆಲವೊಂದು ಎಚ್ಚರಿಕೆ ತೆಗೆದುಕೊಳ್ಳಬೇಕು. ಕೊರೊನಾ ಲಸಿಕೆಗೆ ಮೊದಲು ವೈದ್ಯರನ್ನು ಭೇಟಿಯಾಗುವುದು ಸೂಕ್ತ. ಅಲರ್ಜಿ ಸಮಸ್ಯೆಯಿರುವವರು ವೈದ್ಯರ ಸಲಹೆ ನಂತ್ರ ಲಸಿಕೆ ಹಾಕಿಕೊಳ್ಳಬೇಕು.
ಲಸಿಕೆ ತೆಗೆದುಕೊಂಡ ತಕ್ಷಣ ನಿಮಗೆ ಕೊರೊನಾ ಬರುವುದಿಲ್ಲ ಎಂದಲ್ಲ. ಹಾಗಾಗಿ ಲಸಿಕೆ ತೆಗೆದುಕೊಳ್ಳಲು ಹೋಗುವ ವೇಳೆ ಮುನ್ನೆಚ್ಚರಿಕೆ ವಹಿಸಬೇಕು. ಲಸಿಕಾ ಕೇಂದ್ರಕ್ಕೆ ಹೋಗುವ ವೇಳೆ ಮಾಸ್ಕ್ ಧರಿಸಬೇಕು. ಸ್ಯಾನಿಟೈಜರ್ ಹಾಕಿಕೊಳ್ಳಬೇಕು. ಕೋವಿಡ್ 19ನ ಎಲ್ಲ ಪ್ರೊಟೋಕಾಲ್ ಪಾಲನೆ ಮಾಡಬೇಕು. ಎನ್-95 ಮಾಸ್ಕ್ ಧರಿಸಿಯೇ ಮನೆಯಿಂದ ಹೊರಗೆ ಹೋಗಿ.
ಲಸಿಕಾ ಕೇಂದ್ರದಲ್ಲಿ ಜನಸಂದಣಿ ತಪ್ಪಿಸಿ. ದೂರದಿಂದ ನಿಮ್ಮ ಸರದಿ ಬರುವವರೆಗೆ ಕಾಯಿರಿ. ಕೇಂದ್ರದಲ್ಲಿಯೇ ನಿಮಗೆ ಕೊರೊನಾ ಬರುವ ಸಾಧ್ಯತೆಯಿರುತ್ತದೆ. ಹಾಗಾಗಿ ಅಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಲಸಿಕಾ ಕೇಂದ್ರದಲ್ಲಿ ಅಪ್ಪಿತಪ್ಪಿಯೂ ಮಾಸ್ಕ್ ತೆಗೆಯಬೇಡಿ. ಮಧುಮೇಹ ಹಾಗೂ ರಕ್ತದೊತ್ತಡ ಸಮಸ್ಯೆಯಿಂದ ಬಳಲುವ ರೋಗಿಗಳು ಅವಶ್ಯವಾಗಿ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯಬೇಕು. ಲಸಿಕೆ ಪಡೆಯುವ ಮೊದಲು ಚೆನ್ನಾಗಿ ನಿದ್ರೆ ಮಾಡಿ. ಸರಿಯಾದ ಆಹಾರವನ್ನು ಸೇವನೆ ಮಾಡಿ. ಕೊರೊನಾ ಸೋಂಕಿಗೆ ಒಳಗಾಗಿದ್ದ ವ್ಯಕ್ತಿ ಅಥವಾ ಪ್ಲಾಸ್ಮಾ ಚಿಕಿತ್ಸೆಗೆ ಒಳಗಾಗಿದ್ದ ವ್ಯಕ್ತಿ ಕನಿಷ್ಠ ಒಂದೂವರೆ ತಿಂಗಳು ಕೊರೊನಾ ಲಸಿಕೆಯಿಂದ ದೂರವಿರಬೇಕು.