ಬೆಂಗಳೂರು: ವೆಬ್ ಸಿರೀಸ್ ಒಂದರಲ್ಲಿ ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾಮೂರ್ತಿ ಅವರಿಗೆ ಅವಮಾನ ಮಾಡಿರುವ ಆರೋಪದಡಿ ವೆಬ್ ಸಿರೀಸ್ ನಿರ್ದೇಶಕ ಹಾಗೂ ನಿರ್ಮಾಪಕರ ವಿರುದ್ಧ ದೂರು ದಾಖಲಾಗಿದೆ.
ಓಲ್ಡ್ ಟೌನ್ ಕ್ರಿಮಿನಲ್ಸ್ ಎಂಬ ವೆಬ್ ಸಿರೀಸ್ ನಲ್ಲಿ ಸುಧಾಮೂರ್ತಿ ಅವರಿಗೆ ಅವಹೇಳನ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ನಿರ್ದೇಶಕ ಅಮರ್ ಹಾಗೂ ನಿರ್ಮಾಪಕರ ವಿರುದ್ಧ ನಂದಿನಿ ಲೇಔಟ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವೆಬ್ ಸಿರೀಸ್ ನಲ್ಲಿ ಸುಧಾಮೂರ್ತಿಯವರ ಹೆಸರನ್ನು ಬದಲಿಸಿ ಅವಹೇಳನಕಾರಿಯಾಗಿ ಬಳಕೆ ಮಾಡಲಾಗಿದೆ ಎಂದು ಆರೋಪಿಸಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಜಯರಾಜ್ ನಾಯ್ಡು, ವೆಬ್ ಸಿರೀಸ್ ನಿರ್ದೇಶಕರು ಹಾಗೂ ನಿರ್ಮಾಪಕರ ವಿರುದ್ಧ ದೂರು ದಾಖಲಿಸಿದ್ದಾರೆ.