ಆಂಧ್ರಪ್ರದೇಶದ ಮಾಜಿ ಸಚಿವ ಅಚ್ಚಂ ನಾಯ್ಡು ಅವರನ್ನು ಅಪಹರಣ ಮಾಡಲಾಗಿದ್ದು ಘಟನೆಗೆ ಆಂಧ್ರ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಹೊಣೆಯಾಗಿದ್ದಾರೆ ಎಂದು ಆಂಧ್ರ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ.
ಅಧಿವೇಶನ ಆರಂಭವಾಗುವ 4 ದಿನ ಮೊದಲು ನಡೆದಿರುವ ಘಟನೆಯ ಹಿಂದೆ ಆಂಧ್ರ ಮುಖ್ಯಮಂತ್ರಿ ಕೈವಾಡವಿದೆ. ಭಾರೀ ಕುತಂತ್ರವಿದೆ ಎಂದು ಮಾಜಿ ಸಿಎಂ ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ.