alex Certify SHOCKING: ರಾಜ್ಯದಲ್ಲಿ 9 ವರ್ಷ ಕೆಳಗಿನ 40 ಸಾವಿರ ಮಕ್ಕಳಿಗೆ ಕೊರೊನಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ರಾಜ್ಯದಲ್ಲಿ 9 ವರ್ಷ ಕೆಳಗಿನ 40 ಸಾವಿರ ಮಕ್ಕಳಿಗೆ ಕೊರೊನಾ

ಕೊರೊನಾ ಎರಡನೇ ಅಲೆ ಭಯಾನಕವಾಗಿದೆ. ಕೊರೊನಾ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗ್ತಿದ್ದರೂ ಅಪಾಯ ಮಾತ್ರ ಕಡಿಮೆಯಾಗಿಲ್ಲ. ಕೊರೊನಾದ ಎರಡನೇ ಅಲೆ ಯುವಕರನ್ನು ಹೆಚ್ಚು ಬಲಿ ಪಡೆದಿದೆ. ಇದ್ರ ಜೊತೆಗೆ ಮಕ್ಕಳನ್ನು ಕಾಡ್ತಿದೆ. ಕರ್ನಾಟಕವೊಂದರಲ್ಲೇ 9 ವರ್ಷ ಕೆಳಗಿನ 40 ಸಾವಿರ ಮಕ್ಕಳಿಗೆ ಕೊರೊನಾ ಪಾಸಿಟಿವ್ ಬಂದಿದೆ.

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಕರ್ನಾಟಕದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳು ಸರ್ಕಾರಕ್ಕೆ ನಿದ್ರೆಗೆಡಿಸಿವೆ. ಕರ್ನಾಟಕದಲ್ಲಿ 9 ವರ್ಷದೊಳಗಿನ 39,846 ಮಕ್ಕಳಿಗೆ ಹಾಗೂ 10-19 ವರ್ಷ ವಯಸ್ಸಿನ 1,05,044 ಮಕ್ಕಳಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ಅಂಕಿಅಂಶಗಳ ಪ್ರಕಾರ, ಎರಡನೇ ಅಲೆ ಕೊನೆ ಮಕ್ಕಳಿಗೆ ಹೆಚ್ಚು ಅಪಾಯಕಾರಿ ಎಂದು ಸಾಬೀತಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದ್ರೆ ಎರಡನೇ ಅಲೆ ಸುಮಾರು ಎರಡು ಪಟ್ಟು ವೇಗದಲ್ಲಿ ಮಕ್ಕಳಿಗೆ ಕೊರೊನಾ ಸೋಂಕನ್ನು ಹರಡುತ್ತಿದೆ.

ಈ ಬಾರಿ ಕೊರೊನಾ ವೇಗವಾಗಿ ಹರಡುತ್ತಿದೆ. ಕೊರೊನಾ ಸೋಂಕಿಗೆ ಒಳಗಾದ ವ್ಯಕ್ತಿ ಎರಡನೇ ದಿನಗಳಲ್ಲಿ ಮನೆಯವರಿಗೆ ಹರಡಬಲ್ಲ.ಮಕ್ಕಳು ಅವರ ಸಂಪರ್ಕಕ್ಕೆ ಬರುವುದ್ರಿಂದ ಅವರಿಗೆ ಕೊರೊನಾ ಬೇಗ ಬರ್ತಿದೆ. ಆದ್ರೆ ಮಕ್ಕಳಲ್ಲಿ ಕೊರೊನಾ ಲಕ್ಷಣಗಳು ಸೌಮ್ಯವಾಗಿರುತ್ತವೆ. ಹತ್ತರಲ್ಲಿ ಒಬ್ಬರು-ಇಬ್ಬರು ಆಸ್ಪತ್ರೆಗೆ ದಾಖಲಾಗ್ತಿದ್ದಾರೆ. ಆದ್ರೆ ಮನೆಯಲ್ಲಿ ಲಕ್ಷಣ ಕಂಡು ಬರ್ತಿದ್ದಂತೆ ಪರೀಕ್ಷೆ ಮಾಡಿ ವೈದ್ಯರನ್ನು ಭೇಟಿಯಾಗುವುದು ಮುಖ್ಯ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...