alex Certify ಹಿಂಬಾಲಿಸಿ ಬಂದ ಸರಗಳ್ಳರಿಂದ ಆಘಾತಕಾರಿ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಂಬಾಲಿಸಿ ಬಂದ ಸರಗಳ್ಳರಿಂದ ಆಘಾತಕಾರಿ ಕೃತ್ಯ

ಮಹಿಳೆಯ ಸರ ಕಸಿಯುವ ವೇಳೆ ಕಳ್ಳರು ಬೈಕ್ ನಿಂದ ಬೀಳಿಸಿ ಕೊಲೆ ಮಾಡಿದ ಘಟನೆ ತುಮಕೂರಿನ ಕುಣಿಗಲ್ ಸಮೀಪ ನಡೆದಿದೆ. ಹಂಗರಹಳ್ಳಿಯ 37 ವರ್ಷದ ವಸಂತ ಮೃತಪಟ್ಟವರು ಎಂದು ಹೇಳಲಾಗಿದೆ.

ಚನ್ನಪಟ್ಟಣ ತಾಲ್ಲೂಕು ನಾಗವಾರ ಗ್ರಾಮಕ್ಕೆ ಪುತ್ರನೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಹಿಂಬಾಲಿಸಿ ಬಂದ ಸರಗಳ್ಳರು ಮೇದರದೊಡ್ಡಿ ಸಮೀಪ ಅವರ ಕುತ್ತಿಗೆಗೆ ಕೈ ಹಾಕಿ ಚಿನ್ನದ ಸರ ಕಸಿದು ಪರಾರಿಯಾಗಿದ್ದಾರೆ. ಸರ ಕಸಿಯುವ ರಭಸದಲ್ಲಿ ವಸಂತ ಅವರನ್ನು ಕೆಳಗೆ ಬೀಳಿಸಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆನ್ನಲಾಗಿದೆ. ಹುಲಿಯೂರುದುರ್ಗ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...