alex Certify ಯಾರೂ ಯಾವ ಜಾತಿಯನ್ನೂ ಗುತ್ತಿಗೆ ತೆಗೆದುಕೊಂಡಿಲ್ಲ: ಜಾತಿ ಕಾರ್ಡ್ ವರ್ಕೌಟ್ ಆಗಿದ್ರೆ ನಿಖಿಲ್ ಏಕೆ ಸೋಲ್ತಿದ್ರು? ಸಿದ್ಧರಾಮಯ್ಯ ಪ್ರಶ್ನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯಾರೂ ಯಾವ ಜಾತಿಯನ್ನೂ ಗುತ್ತಿಗೆ ತೆಗೆದುಕೊಂಡಿಲ್ಲ: ಜಾತಿ ಕಾರ್ಡ್ ವರ್ಕೌಟ್ ಆಗಿದ್ರೆ ನಿಖಿಲ್ ಏಕೆ ಸೋಲ್ತಿದ್ರು? ಸಿದ್ಧರಾಮಯ್ಯ ಪ್ರಶ್ನೆ

ಬೆಂಗಳೂರು: ಚುನಾವಣೆ ಬಂದರೆ ಹೆಚ್.ಡಿ. ಕುಮಾರಸ್ವಾಮಿ ಜಾತಿ ಕಾರ್ಡ್ ಪ್ಲೇ ಮಾಡ್ತಾರೆ. ಅವರ ಜಾತಿ ಕಾರ್ಡು ವರ್ಕೌಟ್ ಆಗುವುದಿಲ್ಲವೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಒಕ್ಕಲಿಗರು ಕುಮಾರಸ್ವಾಮಿ ಒಬ್ಬರನ್ನೇ ಫಾಲೋ ಮಾಡುವುದಿಲ್ಲ. ಬೇರೆ ನಾಯಕರನ್ನು ಕೂಡ ಅವರು ಫಾಲೋ ಮಾಡುತ್ತಾರೆ. ಮತದಾರರು ಕುಮಾರಸ್ವಾಮಿ ತಿಳಿದುಕೊಂಡಷ್ಟು ದಡ್ಡರಲ್ಲ. ಅವರು ಮತ ಹಾಕುವಾಗ ವಿವೇಚನೆ ಮಾಡುತ್ತಾರೆ ಎಂದು ಹೇಳಿದ್ದಾರೆ.

ಯಾರೂ ಯಾವ ಜಾತಿಯನ್ನೂ ಗುತ್ತಿಗೆ ತೆಗೆದುಕೊಂಡಿಲ್ಲ. ಚುನಾವಣೆ ಬಂದಾಗ ಮಾತ್ರ ಕುಮಾರಸ್ವಾಮಿಗೆ ಜಾತಿಯ ನೆನಪಾಗುತ್ತದೆ. ಇದೆಲ್ಲ ಚುನಾವಣೆಗಳಲ್ಲಿ ಪರಿಣಾಮ ಬೀರುವುದಿಲ್ಲ. ಪರಿಣಾಮ ಬೀರುವುದಾಗಿದ್ದರೆ ಮಂಡ್ಯದಲ್ಲಿ ಕುಮಾರಸ್ವಾಮಿ ಮಗ ನಿಖಿಲ್ ಕುಮಾರ್ ಅವರು ಏಕೆ ಸೋಲುತ್ತಿದ್ದರು ಎಂದು ಪ್ರಶ್ನಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...