
ಬೆಂಗಳೂರು: ಚುನಾವಣೆ ಬಂದರೆ ಹೆಚ್.ಡಿ. ಕುಮಾರಸ್ವಾಮಿ ಜಾತಿ ಕಾರ್ಡ್ ಪ್ಲೇ ಮಾಡ್ತಾರೆ. ಅವರ ಜಾತಿ ಕಾರ್ಡು ವರ್ಕೌಟ್ ಆಗುವುದಿಲ್ಲವೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಒಕ್ಕಲಿಗರು ಕುಮಾರಸ್ವಾಮಿ ಒಬ್ಬರನ್ನೇ ಫಾಲೋ ಮಾಡುವುದಿಲ್ಲ. ಬೇರೆ ನಾಯಕರನ್ನು ಕೂಡ ಅವರು ಫಾಲೋ ಮಾಡುತ್ತಾರೆ. ಮತದಾರರು ಕುಮಾರಸ್ವಾಮಿ ತಿಳಿದುಕೊಂಡಷ್ಟು ದಡ್ಡರಲ್ಲ. ಅವರು ಮತ ಹಾಕುವಾಗ ವಿವೇಚನೆ ಮಾಡುತ್ತಾರೆ ಎಂದು ಹೇಳಿದ್ದಾರೆ.
ಯಾರೂ ಯಾವ ಜಾತಿಯನ್ನೂ ಗುತ್ತಿಗೆ ತೆಗೆದುಕೊಂಡಿಲ್ಲ. ಚುನಾವಣೆ ಬಂದಾಗ ಮಾತ್ರ ಕುಮಾರಸ್ವಾಮಿಗೆ ಜಾತಿಯ ನೆನಪಾಗುತ್ತದೆ. ಇದೆಲ್ಲ ಚುನಾವಣೆಗಳಲ್ಲಿ ಪರಿಣಾಮ ಬೀರುವುದಿಲ್ಲ. ಪರಿಣಾಮ ಬೀರುವುದಾಗಿದ್ದರೆ ಮಂಡ್ಯದಲ್ಲಿ ಕುಮಾರಸ್ವಾಮಿ ಮಗ ನಿಖಿಲ್ ಕುಮಾರ್ ಅವರು ಏಕೆ ಸೋಲುತ್ತಿದ್ದರು ಎಂದು ಪ್ರಶ್ನಿಸಿದ್ದಾರೆ.