alex Certify BREAKING NEWS: 6 ಜಿಲ್ಲೆಗಳ ಉಸ್ತುವಾರಿ ಸಚಿವರ ನೇಮಕ; ಯಾರಿಗೂ ಸಿಗದ ತವರು ಜಿಲ್ಲೆ ಉಸ್ತುವಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: 6 ಜಿಲ್ಲೆಗಳ ಉಸ್ತುವಾರಿ ಸಚಿವರ ನೇಮಕ; ಯಾರಿಗೂ ಸಿಗದ ತವರು ಜಿಲ್ಲೆ ಉಸ್ತುವಾರಿ

ಬೆಂಗಳೂರು: 6 ಜಿಲ್ಲೆಗಳ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ತವರು ಜಿಲ್ಲೆಗಳ ಉಸ್ತುವಾರಿ ಮೇಲೆ ಕಣ್ಣಿಟ್ಟಿದ್ದವರಿಗೆ ನಿರಾಸೆಯಾಗಿದೆ.

ಡಿಸಿಎಂ ಗೋವಿಂದ ಕಾರಜೋಳ ಅವರನ್ನು ಬೆಳಗಾವಿ ಜಿಲ್ಲಾ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ಮೇಲೆ ಸಚಿವ ಉಮೇಶ್ ಕತ್ತಿ ಕಣ್ಣಿಟ್ಟಿದ್ದರು. ಆದರೆ ಕತ್ತಿ ಅವರನ್ನು ಬಾಗಲಕೋಟೆ ಜಿಲ್ಲಾ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. ಬಾಗಲಕೋಟೆ ಜಿಲ್ಲೆ ಮೇಲೆ ಕಣ್ಣಿಟ್ಟಿದ್ದ ಸಚಿವ ನಿರಾಣಿಗೆ ಕಲಬುರ್ಗಿ ಜಿಲ್ಲೆ ಉಸ್ತುವಾರಿ ನೀಡಲಾಗಿದೆ.

ಫಲಿತಾಂಶದ ದಿನವೇ BSY ಮಹತ್ವದ ನಿರ್ಧಾರ: ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ –ತವರು ಜಿಲ್ಲೆ ನಿರೀಕ್ಷೆಯಲ್ಲಿದ್ದವರಿಗೆ ಶಾಕ್

* ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ-ಬೆಳಗಾವಿ

* ಉಮೇಶ್ ಕತ್ತಿ- ಬಾಗಲಕೋಟೆ ಜಿಲ್ಲೆ

* ಸಚಿವ ಅರವಿಂದ ಲಿಂಬಾವಳಿ- ಬೀದರ್ ಜಿಲ್ಲೆ

* ಸಚಿವ ಎಂಟಿಬಿ ನಾಗರಾಜ್-ಕೋಲಾರ ಜಿಲ್ಲೆ

* ಸಚಿವ ಮುರುಗೇಶ್ ನಿರಾಣಿ -ಕಲಬುರ್ಗಿ

* ಸಚಿವ ಎಸ್.ಅಂಗಾರ – ಚಿಕ್ಕಮಗಳೂರು ಜಿಲ್ಲೆ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...