alex Certify BREAKING NEWS: ಸಿಎಂ ಭೇಟಿಯಾದ ಬಿ.ಎಲ್ ಸಂತೋಷ್ – ಕುತೂಹಲ ಕೆರಳಿಸಿದ ಸಂಪುಟ ವಿಸ್ತರಣೆ ಬೆಳವಣಿಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಸಿಎಂ ಭೇಟಿಯಾದ ಬಿ.ಎಲ್ ಸಂತೋಷ್ – ಕುತೂಹಲ ಕೆರಳಿಸಿದ ಸಂಪುಟ ವಿಸ್ತರಣೆ ಬೆಳವಣಿಗೆ

ಮುಂಬೈ: ಮಹತ್ವದ ಬೆಳವಣಿಗೆಯೊಂದರಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಚರ್ಚೆ ಬೆನ್ನಲ್ಲೇ ಬಿ.ಎಲ್. ಸಂತೋಷ್ ಅವರಿಂದ ಸಿಎಂ ಯಡಿಯೂರಪ್ಪ ಭೇಟಿ ಇದೀಗ ಮಹತ್ವ ಪಡೆದುಕೊಂಡಿದೆ.

ಸಿಎಂ ಅಧಿಕೃತ ನಿವಾಸ ಕಾವೇರಿಗೆ ಬಂದ ಬಿ.ಎಲ್. ಸಂತೋಷ್, ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೆಟಿಯಾಗಿ, 15 ನಿಮಿಷಗಳ ಕಾಲ ಚರ್ಚೆ ನಡೆಸಿದ್ದಾರೆ. ಸಂಪುಟ ವಿಸ್ತರಣೆ ಅಥವಾ ಪುನಾರಚನೆ ವಿಚಾರವಾಗಿ ಸಂತೋಷ್ ಅವರು ರಾಷ್ಟ್ರೀಯ ನಾಯಕರಿಂದ ಸಂದೇಶವನ್ನು ತಂದಿದ್ದಾರೆಯೇ ಎಂಬ ಕುತೂಹಲ ರಾಜ್ಯ ನಾಯಕರಲ್ಲಿ ಮನೆ ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...