alex Certify BMTC ಬಸ್ ಆರಂಭದ ನಿರೀಕ್ಷೆಯಲ್ಲಿರುವ ಬೆಂಗಳೂರಿಗರಿಗೆ ‘ಗುಡ್ ನ್ಯೂಸ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BMTC ಬಸ್ ಆರಂಭದ ನಿರೀಕ್ಷೆಯಲ್ಲಿರುವ ಬೆಂಗಳೂರಿಗರಿಗೆ ‘ಗುಡ್ ನ್ಯೂಸ್’

ಹೊರ ಊರುಗಳಿಂದ ಬೆಂಗಳೂರಿಗೆ ಆಗಮಿಸುವವರಿಗೆ ಹಾಗೂ ಶಾಲಾ – ಕಾಲೇಜು ಮತ್ತು ಉದ್ಯೋಗಕ್ಕೆ ತೆರಳುವವರಿಗೆ ಬಿಎಂಟಿಸಿ ಬಸ್ ಜೀವಾಳ. ಇದೀಗ ಮೂರನೇ ಹಂತದ ಲಾಕ್ಡೌನ್ ನಲ್ಲಿ ಕೆಲ ಸಡಿಲಿಕೆಗಳೊಂದಿಗೆ ವ್ಯಾಪಾರ – ವಹಿವಾಟು, ಉದ್ಯಮ ಆರಂಭವಾಗಿದ್ದು, ಇದರ ಮಧ್ಯೆ ಬಿಎಂಟಿಸಿ ಬಸ್ ಸಂಚಾರವಿಲ್ಲದೆ ಪರದಾಡುವಂತಾಗಿದೆ.

ಇದೀಗ ಸದ್ಯದಲ್ಲೇ ನೆಮ್ಮದಿಯ ಸುದ್ದಿ ಹೊರಬೀಳುವ ನಿರೀಕ್ಷೆಯಿದ್ದು, ಮೂರನೇ ಹಂತದ ಲಾಕ್ಡೌನ್ ಮೇ 17ರಂದು ಅಂತ್ಯಗೊಂಡ ಬಳಿಕ ಬಿಎಂಟಿಸಿ ಬಸ್ ಸಂಚಾರ ಆರಂಭವಾಗುವ ಸಾಧ್ಯತೆಯಿದೆ. ಹೀಗಾಗಿ ಇದಕ್ಕೆ ಪೂರಕವಾದ ಸಿದ್ಧತೆಗಳು ಈಗಾಗಲೇ ಆರಂಭವಾಗಿದೆ.

ಬಿಎಂಟಿಸಿ ಸಿಬ್ಬಂದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಕೆಲಸಕ್ಕೆ ಹಾಜರಾಗಬೇಕು ಎಂಬ ಸೂಚನೆ ನೀಡಲಾಗಿದ್ದು, ಈ ಹಿನ್ನೆಲೆಯಲ್ಲಿ ಆಸ್ಪತ್ರೆ ಮುಂದೆ ಚಾಲಕ – ನಿರ್ವಾಹಕರು ಹಾಗೂ ಇತರೆ ಸಿಬ್ಬಂದಿ ಸಾಲುಗಟ್ಟಿ ನಿಂತಿದ್ದಾರೆ. ಹೀಗಾಗಿ ಮೇ 17ರ ಬಳಿಕ ಬಿಎಂಟಿಸಿ ಬಸ್ ಸಂಚಾರ ಆರಂಭವಾಗುವುದು ಬಹುತೇಕ ನಿಶ್ಚಿತ ಎಂಬ ಮಾತುಗಳು ಕೇಳಿಬರುತ್ತಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...