alex Certify ಅಂದು ಲಸಿಕೆಯನ್ನ ಟೀಕಿಸುವಾಗ ಈ ಪರಿಸ್ಥಿತಿಯ ಅರಿವಿರಲಿಲ್ವೇ….? ವಿಪಕ್ಷಗಳಿಗೆ ನಳೀನ್​ ಕುಮಾರ್ ಕಟೀಲ್​ ಪ್ರಶ್ನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂದು ಲಸಿಕೆಯನ್ನ ಟೀಕಿಸುವಾಗ ಈ ಪರಿಸ್ಥಿತಿಯ ಅರಿವಿರಲಿಲ್ವೇ….? ವಿಪಕ್ಷಗಳಿಗೆ ನಳೀನ್​ ಕುಮಾರ್ ಕಟೀಲ್​ ಪ್ರಶ್ನೆ

ರಾಜ್ಯದಲ್ಲಿ ಲಸಿಕೆಯ ಅಭಾವದ ಕುರಿತಂತೆ ವಿಪಕ್ಷಗಳ ಪ್ರಶ್ನೆಗೆ ಉತ್ತರಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್ ಕಟೀಲ್​ ಇದು ರಾಜಕೀಯ ಮಾಡುವ ಕಾಲವಲ್ಲ, ಒಟ್ಟಾಗಿ ಕೆಲಸ ಮಾಡುವ ಸಮಯ ಎಂದು ಹೇಳಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವ್ರು ವಿಪಕ್ಷದವರು ಕೊರೊನಾ ಲಸಿಕೆಯ ಬಗ್ಗೆ ಟೀಕೆ ಮಾಡುವ ಮುನ್ನ ಈ ಪರಿಸ್ಥಿತಿಯ ಬಗ್ಗೆ ಯೋಚನೆ ಮಾಡಬೇಕಿತ್ತು ಎಂದು ಹೇಳಿದ್ರು.

ದೇಶದಲ್ಲಿ ಕೋವಿಡ್​ ಲಸಿಕೆಗಳನ್ನ ಪೂರೈಸಲು ಎರಡು ಘಟಕಗಳು ಕೆಲಸ ಮಾಡುತ್ತಿವೆ. ಈಗಾಗಲೇ 19 ಕೋಟಿ ಮಂದಿ ಲಸಿಕೆಯನ್ನ ಪಡೆದಿದ್ದಾರೆ.ಆರಂಭದಲ್ಲಿ ಬಹಳಷ್ಟು ಮಂದಿ ಇದನ್ನ ಬಿಜೆಪಿ ಲಸಿಕೆ ಎಂದು ಟೀಕೆ ಮಾಡಿದ್ರು. ಈ ರೀತಿ ಕುಹಕ ಮಾಡಿದವರೇ ಈಗ ಲಸಿಕೆ ಇಲ್ಲ ಅಂತಾ ಅಳ್ತಿದ್ದಾರೆ. ಕೋವಿಡ್​ ಲಸಿಕೆಯ ಬಗ್ಗೆ ಅನುಮಾನ ಪಟ್ಟು ಜನರ ದಾರಿ ತಪ್ಪಿಸಿದ್ರಿ. ಆವತ್ತು ನಿಮಗೆ ಲಸಿಕೆ ಮೇಲೆ ನಂಬಿಕೆ ಇರಲಿಲ್ಲ.

ಆದ್ರೆ ಈಗ ಲಸಿಕೆ ಇಲ್ಲ ಎಂಬ ಚಿಂತೆ ಶುರುವಾಗಿದೆ. ಇಂದು ಜನರು ಕೋವಿಡ್​ನಿಂದ ಸಾವನ್ನಪ್ಪಿದ್ದಾರೆ ಅದಕ್ಕೆ ಇಂತವರೇ ಕಾರಣ. ಕೊರೊನಾ ವಿಚಾರದಲ್ಲಿ ರಾಜಕೀಯ ಮಾಡೋದನ್ನ ಬಿಟ್ಟು ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿ. ಸರ್ಕಾರದಿಂದ ಏನಾದರೂ ವ್ಯತ್ಯಾಸ ಉಂಟಾದ್ರೆ ಟೀಕೆ ಮಾಡೋದ್ರ ಬದಲು ಸಲಹೆ ನೀಡೋದನ್ನ ಕಲಿತುಕೊಳ್ಳಿ ಅಂತಾ ಟಾಂಗ್​ ನೀಡಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...