ರಾಜ್ಯದಲ್ಲಿ ಲಸಿಕೆಯ ಅಭಾವದ ಕುರಿತಂತೆ ವಿಪಕ್ಷಗಳ ಪ್ರಶ್ನೆಗೆ ಉತ್ತರಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಇದು ರಾಜಕೀಯ ಮಾಡುವ ಕಾಲವಲ್ಲ, ಒಟ್ಟಾಗಿ ಕೆಲಸ ಮಾಡುವ ಸಮಯ ಎಂದು ಹೇಳಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವ್ರು ವಿಪಕ್ಷದವರು ಕೊರೊನಾ ಲಸಿಕೆಯ ಬಗ್ಗೆ ಟೀಕೆ ಮಾಡುವ ಮುನ್ನ ಈ ಪರಿಸ್ಥಿತಿಯ ಬಗ್ಗೆ ಯೋಚನೆ ಮಾಡಬೇಕಿತ್ತು ಎಂದು ಹೇಳಿದ್ರು.
ದೇಶದಲ್ಲಿ ಕೋವಿಡ್ ಲಸಿಕೆಗಳನ್ನ ಪೂರೈಸಲು ಎರಡು ಘಟಕಗಳು ಕೆಲಸ ಮಾಡುತ್ತಿವೆ. ಈಗಾಗಲೇ 19 ಕೋಟಿ ಮಂದಿ ಲಸಿಕೆಯನ್ನ ಪಡೆದಿದ್ದಾರೆ.ಆರಂಭದಲ್ಲಿ ಬಹಳಷ್ಟು ಮಂದಿ ಇದನ್ನ ಬಿಜೆಪಿ ಲಸಿಕೆ ಎಂದು ಟೀಕೆ ಮಾಡಿದ್ರು. ಈ ರೀತಿ ಕುಹಕ ಮಾಡಿದವರೇ ಈಗ ಲಸಿಕೆ ಇಲ್ಲ ಅಂತಾ ಅಳ್ತಿದ್ದಾರೆ. ಕೋವಿಡ್ ಲಸಿಕೆಯ ಬಗ್ಗೆ ಅನುಮಾನ ಪಟ್ಟು ಜನರ ದಾರಿ ತಪ್ಪಿಸಿದ್ರಿ. ಆವತ್ತು ನಿಮಗೆ ಲಸಿಕೆ ಮೇಲೆ ನಂಬಿಕೆ ಇರಲಿಲ್ಲ.
ಆದ್ರೆ ಈಗ ಲಸಿಕೆ ಇಲ್ಲ ಎಂಬ ಚಿಂತೆ ಶುರುವಾಗಿದೆ. ಇಂದು ಜನರು ಕೋವಿಡ್ನಿಂದ ಸಾವನ್ನಪ್ಪಿದ್ದಾರೆ ಅದಕ್ಕೆ ಇಂತವರೇ ಕಾರಣ. ಕೊರೊನಾ ವಿಚಾರದಲ್ಲಿ ರಾಜಕೀಯ ಮಾಡೋದನ್ನ ಬಿಟ್ಟು ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿ. ಸರ್ಕಾರದಿಂದ ಏನಾದರೂ ವ್ಯತ್ಯಾಸ ಉಂಟಾದ್ರೆ ಟೀಕೆ ಮಾಡೋದ್ರ ಬದಲು ಸಲಹೆ ನೀಡೋದನ್ನ ಕಲಿತುಕೊಳ್ಳಿ ಅಂತಾ ಟಾಂಗ್ ನೀಡಿದ್ರು.