ಇಡೀ ದೇಶವೇ ಕೊರೊನಾ ವಿರುದ್ಧದ ಹೋರಾಟದಲ್ಲಿರುವ ಈ ಸಂದರ್ಭದಲ್ಲಿ ಕೇವಲ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಹಾಯಕ್ಕೆ ಕಾಯುವ ಬದಲಾಗಿ ಕೆಲವರು ಜನರ ರಕ್ಷಣೆಗೆ ಟೊಂಕ ಕಟ್ಟಿ ನಿಂತಿದ್ದಾರೆ.
ಈಗಾಗಲೇ ಸಾಕಷ್ಟು ಮಂದಿ ಕೊರೊನಾದಿಂದ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಕೈಲಾದ ಸಹಾಯ ಮಾಡುತ್ತಿದ್ದಾರೆ.
ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದವರು ಈಗ ಆಕ್ಸಿಜನ್ ಸಪ್ಲೈಯರ್ ಆಗಿದ್ದಾರೆ. ಶಿಕ್ಷಕರು ಆಹಾರವನ್ನ ಹಂಚ್ತಿದ್ದಾರೆ, ಯುವಜನತೆ ಅಗತ್ಯದಲ್ಲಿ ಇರುವವರಿಗೆ ತುರ್ತು ಸೌಲಭ್ಯ ಒದಗಿಸುತ್ತಿದ್ದಾರೆ. ಹೀಗೆ ಒಬ್ಬರಾದ ಮೇಲೆ ಒಬ್ಬರು ಸಹಾಯ ಹಸ್ತ ಚಾಚಿದ್ದಾರೆ.
ಕೊನೆ ಕ್ಷಣದಲ್ಲಿ ರದ್ದಾಯ್ತು ಮದುವೆ: ಇದರ ಹಿಂದಿದೆ ವಿಚಿತ್ರ ಕಾರಣ
ಇದೇ ರೀತಿ ಬೈಕರ್ ಆಗಿದ್ದ ಬೆಂಗಳೂರು ಮೂಲದ ಇಬ್ಬರು ಸಹೋದರರು ಇದೀಗ ಆಂಬುಲೆನ್ಸ್ ಚಾಲಕರಾಗಿ ಬದಲಾಗಿದ್ದಾರೆ. ಕೊರೊನಾದಿಂದ ಬಳಲುತ್ತಿರುವವರಿಗಾಗಿ ಏನಾದರೂ ಮಾಡಬೇಕೆಂದು ನಿರ್ಧರಿಸಿದ ಈ ಸಹೋದರರು ಆಂಬುಲೆನ್ಸ್ ಚಾಲಕರಾಗಿ ಬದಲಾಗಿದ್ದಾರೆ. ಮುರ್ಥಾಜಾ ಜುನೈದ್ ಹಾಗೂ ಮುತೀಬ್ ಜೋಹೆಬ್ ಈ ರೀತಿಯ ಸಮಾಜ ಸೇವೆ ಮಾಡುತ್ತಿರುವ ಯುವ ಸಹೋದರರಾಗಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಮುತೀಬ್, ಜನರು ಆಸ್ಪತ್ರೆಗಾಗಿ, ಬೆಡ್ಗಾಗಿ, ಆಕ್ಸಿಜನ್ ಗಾಗಿ ಪರಿತಪಿಸುತ್ತಿದ್ದ ಸಾಕಷ್ಟು ವಿಡಿಯೋಗಳನ್ನ ನಾವು ಕಂಡಿದ್ದೇವೆ. ಜನರ ನೋವು ಎದ್ದು ಕಾಣುತ್ತಿತ್ತು. ಇದನ್ನೆಲ್ಲ ನೋಡಿದ ಮೇಲೂ ಸುಮ್ಮನೇ ಕುಳಿತುಕೊಂಡು ಉಳಿದವರ ತಪ್ಪನ್ನ ಎತ್ತಿ ಹೇಳೋದು ಸರಿ ಎನಿಸಲಿಲ್ಲ. ಹೀಗಾಗಿ ನಾವೇ ಜನರ ಸೇವೆಗೆ ಸಿದ್ಧರಾದೆವು ಎಂದು ಹೇಳಿದ್ರು.