ಡೆಹ್ರಾಡೂನ್: ಕೊರೊನಾ 2ನೆ ಅಲೆ ಆರ್ಭಟದ ನಡುವೆಯೇ ಇದೀಗ 3ನೇ ಅಲೆಯೂ ಸದ್ದಿಲ್ಲದೇ ಹರಡುತ್ತಿದೆಯೇ ಎಂಬ ಶಂಕೆ ಆರಂಭವಾಗಿದೆ. ಕಾರಣ 9 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕೂಡ ಹೆಮ್ಮಾರಿ ಸೋಂಕು ಪತ್ತೆಯಾಗುತ್ತಿದೆ.
3ನೇ ಅಲೆಯಲ್ಲಿ ಕೊರೊನಾ ಸೋಂಕು ಮಕ್ಕಳಲ್ಲಿ ಹೆಚ್ಚು ಅಪಾಯವನ್ನು ತರಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದರು. ಆದರೆ ಇದೀಗ ಉತ್ತರಾಖಂಡ್ ರಾಜ್ಯದಲ್ಲಿ 2 ಸಾವಿರಕ್ಕೂ ಹೆಚ್ಚು ಮಕ್ಕಳು ಕೊರೊನಾ ಸೋಂಕಿಗೆ ಒಳಗಾಗಿರುವುದು ಬೆಳಕಿಗೆ ಬಂದಿದೆ. ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಕಳೆದ 14ದಿನದಲ್ಲಿ ರಾಜ್ಯದಲ್ಲಿ 1618 ಮಕ್ಕಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
ಕೊರೊನಾ ಲಸಿಕೆ ಕುರಿತಂತೆ ಮಹತ್ವದ ಮಾಹಿತಿ ಬಹಿರಂಗ – ಲಸಿಕೆ ಪಡೆದವರು ಸೋಂಕಿಗೊಳಗಾದರೂ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಕೇವಲ ಶೇ.0.06 ಮಾತ್ರ
ಕಳೆದ ಒಂದು ವರ್ಷದಲ್ಲಿ ಉತ್ತರಾಖಂಡ್ ನಲ್ಲಿ 2,132 ಮಕ್ಕಳಿಗೆ ಸೋಂಕು ಹರಡಿದೆ. ಇದೀಗ ಮೇ 1ರಿಂದ ಮೇ 14ರ ಅವಧಿಯಲ್ಲಿ 1618 ಮಕ್ಕಳಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿದೆ. ರಾಜ್ಯದಲ್ಲಿ 79 ಸಾವಿರಕ್ಕೂ ಹೆಚ್ಚು ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಈವರೆಗೆ 4,426 ಜನರು ಕೊರೊನಾಗೆ ಬಲಿಯಾಗಿದ್ದಾರೆ.