alex Certify BIG NEWS: 14 ಅಲ್ಲ, 26 ಜನರಲ್ಲಿ ಕೊರೊನಾ ದೃಢ; ಬ್ರಿಟನ್ ನಿಂದ ಬೆಂಗಳೂರಿಗೆ ಸೋಂಕು ಹೊತ್ತು ತಂದ ಪ್ರಯಾಣಿಕರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 14 ಅಲ್ಲ, 26 ಜನರಲ್ಲಿ ಕೊರೊನಾ ದೃಢ; ಬ್ರಿಟನ್ ನಿಂದ ಬೆಂಗಳೂರಿಗೆ ಸೋಂಕು ಹೊತ್ತು ತಂದ ಪ್ರಯಾಣಿಕರು…!

ಬೆಂಗಳೂರು: ಬ್ರಿಟನ್ ನಿಂದ ಬೆಂಗಳೂರಿಗೆ ಆಗಮಿಸಿದವರಿಂದ ರೂಪಾಂತರ ಕೊರೊನಾ ಆತಂಕ ಆರಂಭವಾಗಿದ್ದು, ಇದೀಗ 26 ಜನರಲ್ಲಿ ಸೋಂಕು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಬ್ರಿಟನ್ ನಿಂದ ಬೆಂಗಳೂರಿಗೆ ಆಗಮಿಸಿದ್ದ 14 ಜನರಲ್ಲಿ ರೂಪಾಂತರ ಕೊರೊನಾ ಸೋಂಕು ಪತ್ತೆಯಾಗಿದೆ ಎಂದು ಈ ಹಿಂದೆ ತಿಳಿದುಬಂದಿತ್ತು. ಆದರೆ ಇದೀಗ ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿರುವ ಪ್ರಕಾರ 26 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಇದು ರೂಪಾಂತರ ಕೊರೊನಾ ವೈರಸ್ ಇರಬಹುದೇ ಎಂಬುದನ್ನು ಪರೀಕ್ಷಿಸಲು ಸ್ಯಾಂಪಲ್ ನ್ನು ಲ್ಯಾಬ್ ಗೆ ಕಳುಹಿಸಲಾಗಿದೆ ಎಂದಿದ್ದಾರೆ.

26 ಜನರಲ್ಲೂ ಸೋಂಕಿನ ಲಕ್ಷಣಗಳಿದ್ದು, ಆರೋಗ್ಯದಿಂದಲೇ ಇದ್ದಾರೆ. ಎಲ್ಲರನ್ನೂ ಆಸ್ಪತ್ರೆಗೆ ದಖಲಿಸಲಾಗಿದೆ. ಸಂಜೆ ವೇಳೆಗೆ ಖಚಿತ ಮಾಹಿತಿ ಹೊರಬರಲಿದೆ ಎಂದು ತಿಳಿಸಿದ್ದಾರೆ. ಒಟ್ಟಾರೆ ಯುಕೆಯಿಂದ ಆಗಮಿಸಿದ 26 ಜನರು ರಾಜ್ಯಕ್ಕೆ ರೂಪಾಂತರ ಕೊರೊನಾ ಸೋಂಕು ಹೊತ್ತು ತಂದಿರುವ ಬಗ್ಗೆ ಆತಂಕ ಶುರುವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...