ಬೆಂಗಳೂರು: ರಾಜ್ಯದಲ್ಲಿರುವುದು 3 ಪಕ್ಷದ ಹೊಂದಾಣಿಕೆ ಸರ್ಕಾರ ಎಂಬ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್, ಬಹುಶಃ ಅದು ಕೆಜೆಪಿ, ಬಿಎಸ್‌ಆರ್ ಕಾಂಗ್ರೆಸ್ ಮತ್ತು ಬಿಜೆಪಿ ಇರಬಹುದು ಎಂದು ವ್ಯಂಗ್ಯವಾಡಿದೆ.
ʼಲಾಕ್ ಡೌನ್ʼ ಒತ್ತಡದಿಂದ ಹೊರ ಬರಲು ಹೊಸ ಉಪಾಯ: ಹಸ್ತಮೈಥುನ ಮಾಡಿಕೊಳ್ಳಲು ಉದ್ಯೋಗಿಗಳಿಗೆ ಅರ್ಧ ಗಂಟೆ ಬಿಡುವು ಕೊಟ್ಟ ಲೇಡಿ ಬಾಸ್
ಯೋಗೇಶ್ವರ್ ಹೇಳಿಕೆ ಬಗ್ಗೆ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಇದು ಮೂರು ಪಕ್ಷದ ಸರ್ಕಾರ ಎಂದು ಬಿಜೆಪಿಯ ಸಚಿವರೊಬ್ಬರು ಹೇಳಿದ್ದಾರೆ, ಬಹುಶಃ ಅದು ಕೆಜೆಪಿ, ಬಿಎಸ್‌ಆರ್ ಕಾಂಗ್ರೆಸ್ ಮತ್ತು ಬಿಜೆಪಿ ಇರಬಹುದು. ಬಿ.ವೈ.ವಿಜಯೇಂದ್ರ ಲೂಟಿಯ ಬಗ್ಗೆ ಯತ್ನಾಳ್, ಈಶ್ವರಪ್ಪ, ವಿಶ್ವನಾಥ್, ಯೋಗೀಶ್ವರ್ ಸೇರಿದಂತೆ ಬಹುತೇಕರು ಆರೋಪಿಸಿದರೂ ಬಿಜೆಪಿ ಹೈಕಮಾಂಡ್ ‘ಫ್ಯಾಮಿಲಿ ರೂಲಿಂಗ್’ಗೆ ಕಡಿವಾಣ ಹಾಕದಿರುವುದೇಕೆ? ಎಂದು ಪ್ರಶ್ನಿಸಿದೆ.
BIG NEWS: ದೆಹಲಿಗೆ ಹೋದಾಕ್ಷಣ ಸಿಎಂ ಬದಲಾವಣೆಯಾಗೋದಾದ್ರೆ ರಾಜ್ಯದಲ್ಲಿ ದಿನಕ್ಕೊಬ್ಬರು ಮುಖ್ಯಮಂತ್ರಿಯಾಗ್ತಾರೆ ಎಂದ ಸಚಿವ
ಇದೇ ವೇಳೆ ಪ್ರಧಾನಿ ಮೋದಿ ಬಗ್ಗೆಯೂ ಕಿಡಿಕಾರಿರುವ ಕಾಂಗ್ರೆಸ್, ಮೋದಿ ಇಡೀ ಭಾರತದ ಒಕ್ಕೂಟ ವ್ಯವಸ್ಥೆಯ ಪ್ರಧಾನಿಯೋ ಅಥವಾ ಗುಜರಾತಿಗೆ ಮಾತ್ರ ಪ್ರಧಾನಿಯೋ?ಯೋಜನೆ, ಪರಿಹಾರ ಧನಗಳಿಂದ ಹಿಡಿದು ಔಷಧ ಹಂಚಿಕೆಯವರೆಗೂ ಗುಜರಾತಿಗೆ ಸಿಂಹಪಾಲು ನೀಡಿದ್ದಾರೆ. ಆದರೂ ನಮ್ಮ ರಾಜ್ಯದ 25 ಸಂಸದರು ಯಾವ ಅನ್ಯಾಯವನ್ನೂ ಪ್ರಶ್ನಿಸದೆ ಬಿಲ ಸೇರಿದ್ದಾರೆ, ಮೋದಿ ಮರ್ಯಾದೆ ಉಳಿಸಲು ಮಾತ್ರ ‘ಟೂಲ್ ಕಿಟ್’ ಹಿಡಿದು ಹೊರಬರುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.