ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಎಸ್ಐಟಿ ಅಧಿಕಾರಿಗಳ ಮುಂದೆ ತಪ್ಪೊಪ್ಪಿಕೊಂಡ ಬೆನ್ನಲ್ಲೇ ಇಡೀ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಯುವತಿ ಹಾಗೂ ಆರೋಪಿಗಳಿಗೆ ತಿರುಗುಬಾಣವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಂಭ್ರಮದ ಮದುವೆ ಮನೆಯಲ್ಲಿ ಸೂತಕದ ಛಾಯೆ: ವಿವಾಹವಾದ ನಾಲ್ಕೇ ದಿನಕ್ಕೆ ಕೊರೋನಾಗೆ ಮದುಮಗಳು ಬಲಿ
ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಸಿಡಿ ಪ್ರಕರಣದ ಪ್ರಮುಖ ಕಿಂಗ್ ಪಿನ್ ಗಳೆಂದು ಹೇಳಲಾಗಿದ್ದ ನರೇಶ್ ಹಾಗೂ ಶ್ರವಣ್ ತಲೆ ಮರೆಸಿಕೊಂಡಿದ್ದು, ಈವರೆಗೂ ಪತ್ತೆಯಾಗಿಲ್ಲ. ಸದಾಶಿವನಗರ ಠಾಣೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಬಂಧನ ಭೀತಿಯಲ್ಲಿರುವ ನರೇಶ್ ಹಾಗೂ ಶ್ರವಣ್ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಬೇಲ್ ಸಿಗುವುದು ಅನುಮಾನ ಎನ್ನಲಾಗಿದೆ.
ಕಾರಣ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿಯಲ್ಲಿರುವುದು ತಾನೇ. ಯುವತಿ ಕೂಡ ತನಗೆ ಪರಿಚಿತಳಿದ್ದು, ಆಕೆಯೊಂದಿಗೆ ಸಮ್ಮತಿ ಸೆಕ್ಸ್ ಮಾಡಿದ್ದಾಗಿ ಹೇಳಿದ್ದರು. ಅಲ್ಲದೇ ತನಗೆ ಗೊತ್ತಿಲ್ಲದೆ ಆರೋಪಿಗಳು ವಿಡಿಯೋ ರೆಕಾರ್ಡ್ ಮಾಡಿದ್ದಾಗಿ ಎಸ್ಐಟಿ ಮುಂದೆ ಒಪ್ಪಿಕೊಂಡಿದ್ದು, ಜಾರಕಿಹೊಳಿ ಹೇಳಿಕೆಗಳು ಆರೋಪಿಗಳಿಗೆ ಸಂಕಷ್ಟ ತಂದೊಡ್ದುವ ಸಾಧ್ಯತೆ ಇದೆ ಎನ್ನಲಾಗಿದೆ.
ನೆಹರೂ ಪುಣ್ಯಸ್ಮರಣೆಯಂದು ವಿಶೇಷ ಪತ್ರ ಶೇರ್ ಮಾಡಿದ ಶಶಿ ತರೂರ್
ಈ ಬೆಳವಣಿಗೆ ಬೆನ್ನಲ್ಲೇ ಎಸ್ಐಟಿ ಅಧಿಕಾರಿಗಳು ಸಿಡಿ ಕೇಸ್ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನೀಡದಂತೆ ಕೋರ್ಟ್ ಗೆ ಆಕ್ಷೇಪಣಾ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.