alex Certify ನೆಹರೂ ಪುಣ್ಯಸ್ಮರಣೆಯಂದು ವಿಶೇಷ ಪತ್ರ ಶೇರ್​ ಮಾಡಿದ ಶಶಿ ತರೂರ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಹರೂ ಪುಣ್ಯಸ್ಮರಣೆಯಂದು ವಿಶೇಷ ಪತ್ರ ಶೇರ್​ ಮಾಡಿದ ಶಶಿ ತರೂರ್​

ಕೋವಿಡ್ ಕಾರಣದಿಂದಾಗಿ ಇಂದು ದೇಶ ಕಂಡ ಮೊದಲ ಪ್ರಧಾನಿ ಜವಹರಲಾಲ್​ ನೆಹರೂ ಅವರ 57ನೇ ಪುಣ್ಯಸ್ಮರಣೆ ಇದ್ದರೂ ಸಹ ಯಾವುದೇ ಕಾರ್ಯಕ್ರಮಗಳನ್ನ ನಡೆಸೋಕೆ ಸಾಧ್ಯವಾಗ್ತಿಲ್ಲ. ಹೀಗಾಗಿ ಅನೇಕ ಸಚಿವರು ಹಾಗೂ ರಾಜಕಾರಣಿಗಳು ಸೋಶಿಯಲ್​ ಮೀಡಿಯಾದ ಮೂಲಕವೇ ನೆಹರೂರಿಗೆ ನಮನ ಸಲ್ಲಿಸಿದ್ದಾರೆ.

ಸಂಸದ ಶಶಿ ತರೂರ್​ ಸಹ ನೆಹರೂ ಪುಣ್ಯಸ್ಮರಣೆ ಮಾಡಿದ್ದು ವಿಶೇಷವಾದ ಫೋಟೋವೊಂದನ್ನ ಫೇಸ್​ಬುಕ್​ನಲ್ಲಿ ಶೇರ್​ ಮಾಡಿದ್ದಾರೆ.
ದೇಶ ಕಂಡ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರಾದ ಸಾಹಿತ್ಯದ ಗುರುದೇವ್​ ರವೀಂದ್ರನಾಥ್​ ಠಾಗೂರ್​ ಮಾಜಿ ಪ್ರಧಾನಿ ಜವಹರಲಾಲ್​ ನೆಹರೂ ಅವರನ್ನ ಹೊಗಳಿ ಬರೆದಿರುವ ಪತ್ರದ ಫೋಟೋವೊಂದನ್ನ ಈ ದಿನದಂದು ಶಶಿ ತರೂರ್ ಶೇರ್​ ಮಾಡಿದ್ದಾರೆ.

ಈ ಪತ್ರದಲ್ಲಿ ರವೀಂದ್ರನಾಥ್​ ಠಾಗೂರ್​: ನಿಮ್ಮ ಸಾಧನೆಗಳ ಬಗ್ಗೆ ಹೆಮ್ಮೆ ಎನಿಸುತ್ತಿದೆ. ನಿಮ್ಮ ಸಾಧನೆಯ ಹಾದಿಯಿಂದ ನಾನು ಪ್ರಭಾವಿತನಾಗಿದ್ದೇನೆ ಎಂದು ಈ ಪತ್ರದಲ್ಲಿ ನೆಹರೂ ಅವರ ಸಾಧನೆಗಳನ್ನ ಕೊಂಡಾಡಿದ್ದಾರೆ. ಅಂದ ಹಾಗೆ ಈ ಪತ್ರವನ್ನ ಮೇ 31 – 1936ರಲ್ಲಿ ಶಾಂತಿನಿಕೇತನದಲ್ಲಿರುವ ಠಾಗೂರ್​ ನಿವಾಸದಿಂದ ಬರೆಯಲಾಗಿದೆ.

ಈ ಪತ್ರದ ಫೋಟೋವನ್ನ ಹಂಚಿಕೊಂಡಿರುವ ತರೂರ್​​, 1936ರಲ್ಲಿ ನೆಹರೂ ಅವರ ಆತ್ಮ ಚರಿತ್ರೆಯನ್ನ ಓದಿದ ಬಳಿಕ ಗುರುದೇವ ರವೀಂದ್ರನಾಥ್​ ಠಾಗೂರ್​ ಬರೆದ ಸಾಲುಗಳು ಇದಾಗಿದೆ ಎಂದು ಶೀರ್ಷಿಕೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...