ಬೆಂಗಳೂರು: ಫುಡ್ ಡೆಲಿವರಿಗೆ ಹೋಗಿದ್ದಾಗ ಜೊಮ್ಯಾಟೋ ಫುಡ್ ಡೆಲಿವರಿ ಬಾಯ್ ಯುವತಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಯುವತಿಯೇ ನನ್ನ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾಳೆ ಎಂದು ಯುವಕ ಆರೋಪಿಸಿದ್ದಾನೆ.
ಫುಡ್ ಡೆಲಿವರಿಗೆ ಹೋದಾಗ ಯುವತಿ ಹಿತೇಶಾ ಚಂದ್ರಾನಿ ಮೇಲೆ ಜೊಮ್ಯಾಟೋ ಬಾಯ್ ಹಲ್ಲೆ ನಡೆಸಿದ್ದಾನೆ ಎಂದು ಯುವತಿ ಆರೋಪಿಸಿದ ಬೆನ್ನಲ್ಲೇ ಜೊಮ್ಯಾಟೋ ಪುಡ್ ಡೆಲೆವರಿ ಬಾಯ್ ಕಾಮ್ ರಾಜ್ ನನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದರು.
ಇದೀಗ ವಿಚಾರಣೆ ವೇಳೆ ಕಾಮ್ ರಾಜ್ ಯುವತಿಯೇ ರಂಪಾಟ ಮಾಡಿ ತನ್ನ ಮೇಲೆ ಹಲ್ಲೆ ನಡೆಸಿದ್ದಾಗಿ ಹೇಳಿದ್ದಾನೆ. ಅಂದು ಫುಡ್ ಡೆಲಿವರಿ ಮಾಡಲು ತಡವಾಯಿತು. ತಡವಾಗಿದ್ದಕ್ಕೆ ಯುವತಿ ಜಗಳವಾಡಿದ್ದಾಳೆ. ಟ್ರಾಫಿಕ್ ಸಮಸ್ಯೆಯಿಂದ ತಡವಾಗಿದ್ದಾಗಿ ಹೇಳಿದೆ. ಪಾರ್ಸಲ್ ಗೆ ಹಣ ಪಾವತಿಸುವಂತೆ ಕೇಳಿದೆ. ಆದರೆ ಯುವತಿ ಹಣ ನೀಡುವುದಿಲ್ಲ ಎಂದು ಹೇಳಿ ಜೊಮ್ಯಾಟೋ ಕಸ್ಟಮರ್ ಸಪೋರ್ಟರ್ ಬಳಿ ಮಾತನಾಡಿದಳು. ಆತ ಫುಡ್ ಹಿಂದಿರುಗಿಸುವಂತೆ ಹೇಳಿದ್ದಾರೆ. ಹೀಗಾಗಿ ನಾನು ಯುವತಿಗೆ ಫುಡ್ ವಾಪಸ್ ಕೊಡಲು ಹೇಳಿದೆ. ಆದರೆ ಯುವತಿ ಹಣವನ್ನೂ ನೀಡದೇ ಫುಡ್ ವಾಪಸ್ ನೀಡದೇ ಜಗಳಕ್ಕೆ ನಿಂತಿದ್ದಾಳೆ.
ʼಆರ್ಥಿಕʼ ಸಂಕಷ್ಟಕ್ಕೊಳಗಾದರೂ ಎದೆಗುಂದದೆ ಯಶಸ್ಸು ಸಾಧಿಸಿದ ಶೆಫ್
ಅನಿವಾರ್ಯವಾಗಿ ಫುಡ್ ಪಾರ್ಸಲ್ ಅಲ್ಲೇ ಬಿಟ್ಟು ಹಿಂದಿರುಗಲು ಹೋದೆ ಆದರೆ ಯುವತಿ ನನ್ನ ಮೇಲೆ ಚಪ್ಪಲಿ ಎಸೆದು ಬಾಯಿಗೆ ಬಂದಂತೆ ಬೈಯ್ಯಲು ಆರಂಭಿಸಿದಳು ಅಷ್ಟೇ ಅಲ್ಲ, ನನ್ನ ಮೇಲೆ ಹಲ್ಲೆಗೆ ಮುಂದಾಗಿದ್ದಾಳೆ ನಾನು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆಕೆಯ ಕೈಲಿದ್ದ ಉಂಗುರವೇ ಆಕೆಯ ಮೂಗಿಗೆ ತಾಗಿ ರಕ್ತ ಬರಲಾರಂಭಿಸಿದೆ. ನಾನು ಭಯದಿಂದ ಅಲ್ಲಿಂದ ತಪ್ಪಿಸಿಕೊಂಡು ಬಂದೆ ಎಂದು ವಿವರಿಸಿದ್ದಾನೆ.
ಘಟನೆ ಬೆನ್ನಲ್ಲೇ ಜೊಮ್ಯಾಟೋ, ಕಾಮ್ ರಾಜ್ ನನ್ನು ಕೆಲಸದಿಂದ ವಜಾಗೊಳಿಸಿದೆ. ಕಾಮ್ ರಾಜ್ ಸ್ಪಷ್ಟನೆ ಬೆನ್ನಲ್ಲೇ ಇದೀಗ ಹಲವರು ಆತನ ಬೆಂಬಲಕ್ಕೆ ನಿಂತಿದ್ದಾರೆ.