alex Certify BIG NEWS: ಮಂಗಳೂರು ಗೋಡೆ ಬರಹ – ಉಗ್ರರ ಕೃತ್ಯದ ಸುಳಿವು ನೀಡಿದ ಗೃಹ ಸಚಿವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮಂಗಳೂರು ಗೋಡೆ ಬರಹ – ಉಗ್ರರ ಕೃತ್ಯದ ಸುಳಿವು ನೀಡಿದ ಗೃಹ ಸಚಿವ

ಮಂಗಳೂರು: ಮಂಗಳೂರಿನಲ್ಲಿ ಎರಡು ಕಡೆ ಗೋಡೆ ಮೇಲೆ ಉಗ್ರರ ಪರ ಬರಹ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಉಗ್ರರ ಕೃತ್ಯಕ್ಕೂ ಮುನ್ನ ಇಂತಹ ಬರಹಗಳನ್ನು ಬರೆಯುತ್ತಾರೆ. ಅಂತರಾಷ್ಟ್ರೀಯ ಮಟ್ಟದಲ್ಲೂ ಇಂತಹ ಘಟನೆಗಳು ನಡೆದಿದೆ ಎಂದು ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವರು, ಕಾಶ್ಮೀರ, ಇರಾನ್, ಇರಾಕ್ ನಲ್ಲೂ ಕೂಡ ಭಯೋತ್ಪದಕರು ವಿಧ್ವಂಸಕ ಕೃತ್ಯ ನಡೆಸುವ ಮುನ್ನ ಹೀಗೆ ಬೆದರಿಕೆ ಹಾಕುತ್ತಾರೆ. ಅದೇ ರೀತಿ ಮಂಗಳೂರಿನಲ್ಲಿ ಕೂಡ ಸಣ್ಣ ಮಾದರಿಯ ಕೃತ್ಯ ನಡೆದಿದೆ ಎಂದರು.

ಸೂಕ್ಷ ಪ್ರದೇಶ, ಗಲಭೆ ಪೀಡಿತ ಸ್ಥಳಗಳಲ್ಲಿ ಉಗ್ರರು ಇಂತಹ ಬರಹದ ಮೂಲಕ ಎಚ್ಚರಿಸುತ್ತಾರೆ. ಹಾಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...