ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಅಟ್ಟಹಾಸಕ್ಕೆ ಖಾಕಿ ಪಡೆ ನಲುಗುತ್ತಿದೆ. ಬರೋಬ್ಬರಿ 1418 ಪೊಲೀಸ್ ಸಿಬ್ಬಂದಿಗಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
ಕೊರೊನಾ ಮಾಹಾಮಾರಿ ಪೊಲೀಸ್ ಇಲಾಖೆಯನ್ನು ಇನ್ನಿಲ್ಲದಂತೆ ಕಾಡುತ್ತಿದ್ದು, 13 ಪೊಲೀಸರು ಸೋಂಕಿಗೆ ಬಲಿಯಾಗಿದ್ದಾರೆ. 725 ಪೊಲೀಸರು ಹೋಂ ಐಸೋಲೇಟ್ ಆಗಿದ್ದಾರೆ.
24 ಗಂಟೆಯಲ್ಲಿ 3,11,170 ಜನರಿಗೆ ಕೊರೊನಾ; 4,000ಕ್ಕೂ ಹೆಚ್ಚು ಮಂದಿ ಸಾವು
ಸಿಲಿಕಾನ್ ಸಿಟಿಯ 655 ಪೊಲೀಸರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಕೊರೊನಾ ವಾರಿಯರ್ಸ್ ಆಗಿರುವ ಪೊಲೀಸರೇ ಇದೀಗ ವೈರಸ್ ಗೆ ತುತ್ತಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.