alex Certify BIG NEWS: ಪ್ರಧಾನಿ ಮೋದಿ ನಾಟಕದ ಕಣ್ಣೀರು; ಜನ ಮೋಸ ಹೋಗಬೇಡಿ ಎಂದ ವಿಪಕ್ಷ ನಾಯಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪ್ರಧಾನಿ ಮೋದಿ ನಾಟಕದ ಕಣ್ಣೀರು; ಜನ ಮೋಸ ಹೋಗಬೇಡಿ ಎಂದ ವಿಪಕ್ಷ ನಾಯಕ

ಬೆಂಗಳೂರು: ಕೊರೊನಾ ಅಟ್ಟಹಾಸದ ಜೊತೆಗೆ ಈಗ ಬ್ಲ್ಯಾಕ್ ಫಂಗಸ್ ಪ್ರಕರಣ ಹೆಚ್ಚುತ್ತಿದೆ. ಪರಿಸ್ಥಿತಿ ನಿಭಾಯಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಸೋಂಕು ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವ ಬದಲು ಪ್ರಧಾನಿ ಮೋದಿ ಕಣ್ಣೀರು ಹಾಕಿದಂತೆ ನಾಟಕವಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕೊರೊನಾ ಸೋಂಕಿಗೆ ಉತ್ಪಾದನೆಯಾದ ಲಸಿಕೆಗಳನ್ನು ಬೇರೆ ದೇಶಗಳಿಗೆ ಕಳುಹಿಸಿಕೊಟ್ಟರು. ದೇಶದ ಜನರು ಚಿಕಿತ್ಸೆ ಸಿಗದೇ ಲಸಿಕೆಯಿಲ್ಲದೇ ಸಾವನ್ನಪ್ಪುವ ಸ್ಥಿತಿಗೆ ತಂದರು. ದೇಶದಲ್ಲಿ ವ್ಯಾಕ್ಸಿನ್ ಅಭಾವ ಎದುರಾಗಿದೆ. ಪ್ರಧಾನಿ ಮೋದಿ ಕಣ್ಣೀರ ನಾಟಕವಾಡುತ್ತಿದ್ದಾರೆ. ಇಂತಹ ನಾಟಕದ ಮೂಲಕ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಕೇರಳ ಯುವತಿಗೆ ಕಮರ್ಷಿಯಲ್ ವಿಮಾನದ ಮೊದಲ ಪೈಲೆಟ್ ಎಂಬ ‘ಹೆಗ್ಗಳಿಕೆ’

ಕೊರೊನಾ ಹೋಗಲಾಡಿಸಲು ಚಪ್ಪಾಳೆ ತಟ್ಟಿ, ದೀಪ ಬೆಳಗಲು ಹೇಳಿದರು ಅದೆಲ್ಲವನ್ನು ಮಾಡಿದ್ದಾಯಿತು. ಚಪ್ಪಾಳೆ, ಜಾಗಟೆ, ದೀಪ, ತಟ್ಟೆ, ಕಣ್ಣೀರಿನಿಂದ ಕೊರೊನಾ ಓಡಿಸಲಾಗದು. ಕಣ್ಣೀರ ನಾಟಕವಾಡಿ ಈಗ ಜನರನ್ನು ವಂಚಿಸಲು ಹೊರಟಿದ್ದಾರೆ. ಇದೆಕ್ಕೆಲ್ಲ ಜನ ಮೋಸ ಹೋಗಬಾರದು ಎಂದು ಹೇಳಿದರು.

ಕಲ್ಯಾಣ ಕರ್ನಾಟಕದಲ್ಲಿ 145 ಶಿಕ್ಷಕರು ಕೊರೊನಾಗೆ ಬಲಿ: ಸರ್ಕಾರದ ನಿರ್ಲಕ್ಷ್ಯಕ್ಕೆ ಕುಮಾರಸ್ವಾಮಿ ಕಿಡಿ

ಕೊರೊನಾ ಲಾಕ್ ಡೌನ್ ನಲ್ಲಿ ಸಂಕಷ್ಟದಲ್ಲಿರುವವರಿಗೆ ಎಂದು ಸಿಎಂ ಯಡಿಯೂರಪ್ಪನವರು ಪ್ಯಾಕೆಜ್ ಘೋಷಣೆ ಮಾಡಿದ್ದಾರೆ ಈವರೆಗೂ ಯಾರಿಗೂ ತಲುಪಿಲ್ಲ. ಅಸಂಘಟಿತ ಕಾರ್ಮಿಕರು ಸೇರಿದಂತೆ ಹಲವರನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಯಾವುದೇ ಪರಿಹಾರ ಪ್ರಕಟಿಸಿಲ್ಲ. ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಸಾವನ್ನಪ್ಪಿದವರಿಗೆ ಪರಿಹಾರ ಸಿಕ್ಕಿದ್ದು ನಮ್ಮ ಹೋರಾಟದಿಂದ. ನಾವು ಹೋರಾಟ ಮಾಡದಿದ್ದರೆ ಪರಿಹಾರ ಸಿಗುತ್ತಿರಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...