ರಾಯಚೂರು: ನಾಲ್ಕು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಯಿದೆ. ಆದರೆ ನಾಲ್ಕೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಭವಿಷ್ಯ ನುಡಿದಿದ್ದಾರೆ.
ತಮಿಳುನಾಡಿನಲ್ಲಿ ಈಗ ಸ್ಟಾಲಿನ್ ಅವರಿಗೆ ಹೆಚ್ಚು ಶಕ್ತಿಯಿದೆ. ಇನ್ನು ಕೇರಳದಲ್ಲಿ ಎಲ್.ಡಿ.ಎಫ್. ಗೆ ಶಕ್ತಿಯಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಹಾಗೂ ಬಿಜೆಪಿ ನಡುವೆ ದೊಡ್ಡ ಹೋರಾಟವೇ ನಡೆದಿದೆ. ಅದೇನೆ ಇದ್ದರೂ ಮಮತಾ ಬ್ಯಾನರ್ಜಿ ಹೋರಾಟ ಮೆಚ್ಚುವಂತದ್ದು. ಮೂರನೇ ಬಾರಿಯೂ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಹೇಳಿದರು.
ಸೈನಿಕರಿಗಾಗಿ ಹಾಡು ಹಾಡಿದ ಕೇಂದ್ರ ಸಚಿವ….!
ಇದೇ ವೇಳೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ತಿದ್ದುಪಡಿ ಕಾಯ್ದೆ ವಿಚಾರವಾಗಿ ಮಾತನಾಡಿದ ದೇವೇಗೌಡರು, ಈ ಸಂದರ್ಭದಲ್ಲಿ ಕೃಷಿ ಕಾಯ್ದೆ ಜಾರಿ ತಪ್ಪು ನಿರ್ಧಾರ. ರೈತರಿಗೆ ಅನಗತ್ಯ ಹಿಂಸೆ ನೀಡಬಾರದು, ಎರಡು ತಿಂಗಳ ಕಾಲ ಕಾಯ್ದೆ ಜಾರಿ ವಿಚಾರ ಮುಂದೂಡುವಂತೆ ಸಲಹೆ ನೀಡಿದ್ದೆ. ಇದು ಪ್ರತಿಷ್ಠೆ ವಿಚಾರವಾಗಬಾರದು ಎಂದು ಕೂಡ ತಿಳಿಸಿದ್ದೆ. ರೈತರಿಗೆ ತಮ್ಮ ನೋವು ಹೇಳಿಕೊಳ್ಳುವ ಸ್ವಾತಂತ್ರ್ಯವಿದೆ. ಕೊರೆಯುವ ಚಳಿಯನ್ನೂ ಲೆಕ್ಕಿಸದೇ ಮೂರು ತಿಂಗಳಿಂದ ರೈತರು ಹೋರಾಟ ನಡೆಸಿದ್ದಾರೆ. ರೈತರ ಹೋರಾಟದಲ್ಲಿ ಖಲಿಸ್ತಾನ ಕೈವಾಡವಿದೆ ಎಂಬುದು ಕೇವಲ ಊಹಾಪೋಹ ಎಂದು ಹೇಳಿದರು.