alex Certify ಸೈನಿಕರಿಗಾಗಿ ಹಾಡು ಹಾಡಿದ ಕೇಂದ್ರ ಸಚಿವ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೈನಿಕರಿಗಾಗಿ ಹಾಡು ಹಾಡಿದ ಕೇಂದ್ರ ಸಚಿವ….!

ಗಡಿ ಪ್ರದೇಶದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆಗೆ ತೆರಳಿದ್ದ ಕೇಂದ್ರ ಸಚಿವರು, ಅಲ್ಲಿದ್ದ ಸೈನಿಕರನ್ನು ಸಂತೋಷಪಡಿಸುವುದಕ್ಕಾಗಿ ಹಾಡು ಹಾಡಿದ್ದಾರೆ.

ಕೇಂದ್ರ ಯುವಜನ ಸೇವೆ ಮತ್ತು ಕ್ರೀಡಾ ಸಚಿವ ಕಿರಣ್ ರಿಜಿಜು ಹಿಂದಿ ಸಿನಿಮಾದ ಹಾಡುಗಳನ್ನು ಹೇಳುವ ಮೂಲಕ ಸೈನಿಕರನ್ನು ರಂಜಿಸಿದ್ದಾರೆ.

ಟ್ವಿಟರ್​ ಬಳಿಕ ಇದೀಗ ಯುಟ್ಯೂಬ್​ನಲ್ಲಿ ರೈತ ಪ್ರತಿಭಟನೆ ಪರ ವಿಡಿಯೋಗಳಿಗೆ ಬ್ರೇಕ್…!

ಈ ವಿಡಿಯೋವನ್ನು ಸ್ವತಃ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ಸಚಿವ ರಿಜಿಜು, ನಾನು ಹಾಡುಗಾರನಲ್ಲ. ಆದರೆ, ನಮ್ಮ ಸೈನಿಕರಿಗಾಗಿ ಹಾಡಲು ಹೆಮ್ಮೆಪಡುತ್ತೇನೆ. ರಸ್ತೆ ಮತ್ತಿತರೆ ಮೂಲಸೌಕರ್ಯ ಅಭಿವೃದ್ಧಿ ಪರಿಶೀಲಿಸಲು ಬಂದ ನನಗೆ ಭಾರತೀಯ ಸೇನೆಯ 62 ಇಂಜಿನಿಯರ್ ರೆಜಿಮೆಂಟ್ ಸಿಬ್ಬಂದಿ ಜೊತೆಗೆ ಅವಿಸ್ಮರಣೀಯ ಕಾಲ ಕಳೆಯುವ ಅವಕಾಶ ಸಿಕ್ಕಿತು ಎಂದಿದ್ದಾರೆ.

ವೈರಲ್ ಆಗಿರುವ ಈ ವಿಡಿಯೋವನ್ನು 47 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಸಚಿವರ ಸುಪ್ತ ಪ್ರತಿಭೆಯನ್ನು ಮೆಚ್ಚಿ ಕೊಂಡಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...