alex Certify BIG NEWS: ಕೋವಿಡ್ ನಿಯಂತ್ರಣದ ಬದಲು ಕಂಡವರ ಹೆಂಡತಿಯರ ಲೆಕ್ಕ ಹಾಕುವುದರಲ್ಲಿ ಬ್ಯುಸಿಯಾದ ಸಚಿವರು; ಸುಧಾಕರ್ ಗೆ ಟಾಂಗ್ ನೀಡಿದ ಕಾಂಗ್ರೆಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೋವಿಡ್ ನಿಯಂತ್ರಣದ ಬದಲು ಕಂಡವರ ಹೆಂಡತಿಯರ ಲೆಕ್ಕ ಹಾಕುವುದರಲ್ಲಿ ಬ್ಯುಸಿಯಾದ ಸಚಿವರು; ಸುಧಾಕರ್ ಗೆ ಟಾಂಗ್ ನೀಡಿದ ಕಾಂಗ್ರೆಸ್

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಸೋಂಕು ನಿಯಂತ್ರಿಸುವುದರಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ರಾಜ್ಯ ಕಾಂಗ್ರೆಸ್ ಕಿಡಿಕಾರಿದೆ.

ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವಿರುದ್ಧ ಸರಣಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ಕಳೆದ ವರ್ಷ ಕರೋನಾ ಬಂದಾಗ ಸ್ವಿಮ್ಮಿಂಗ್ ಫೂಲ್‌ನಲ್ಲಿ ಮೋಜು ಮಾಡುತ್ತಿದ್ದರು. ಈ ಭಾರಿ ಕೊರೊನಾ ಉಲ್ಬಣಿಸಿದಾಗ ಸಿಡಿಗೆ ತಡೆಯಾಜ್ಞೆ ತರುವುದರಲ್ಲಿ, ಕಂಡವರ ಹೆಂಡತಿಯರ ಲೆಕ್ಕ ಹಾಕುವುದರಲ್ಲಿ ಬ್ಯುಸಿಯಾಗಿದ್ದಾರೆ ಎಂದು ಟಾಂಗ್ ನೀಡಿದೆ.

ಉಪಚುನಾವಣೆ ಹಿನ್ನೆಲೆ ಭರವಸೆ ನೀಡಲಾಗದು; ಮುಷ್ಕರ ಮುಂದಕ್ಕೆ ಹಾಕಿ ಎಂದ ಸಾರಿಗೆ ಸಚಿವ

ಆಂತರಿಕ ಕಚ್ಚಾಟ, ಸಿಡಿ ಕಳ್ಳಾಟದಲ್ಲಿ ಮುಳುಗಿದ ಬಿಜೆಪಿ ಸರ್ಕಾರ, ಕೊರೊನಾ ನಿರ್ವಹಿಸುವುದರಲ್ಲಿ ಸೋತಿದೆ. ಕೋವಿಡ್‌ ಟೆಸ್ಟ್‌ಗಳನ್ನು ಕಡಿಮೆ ಮಾಡಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡು ಕುಳಿತಿದ್ದರ ಪರಿಣಾಮವಾಗಿ, ಸಂಪೂರ್ಣ ಟ್ರಯಲ್ ಪ್ರಕ್ರಿಯೆ ಮುಗಿಸದ ವ್ಯಾಕ್ಸಿನ್‌ಗಳ ಮಾರ್ಕೆಟಿಂಗ್ ಮಾಡುವುದರಲ್ಲಿ ಮುಳುಗಿದ್ದರ ಪರಿಣಾಮವಾಗಿ, ಸೋಂಕಿತಸರ್ಕಾರ ಕರೋನಾ ಹೆಸರಲ್ಲಿ ಭ್ರಷ್ಟಾಚಾರ ನಡೆಸಿದ್ದರ ಪರಿಣಾಮವಾಗಿ ಇಂದು ಸೋಂಕು ದಾಖಲೆ ಮಟ್ಟಕ್ಕೇರಿದೆ ಎಂದು ಛೇಡಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...