ಬೆಂಗಳೂರು: ಉಪಚುನಾವಣಾ ಕರ್ತವ್ಯ, ವಿದ್ಯಾಗಮ ಇನ್ನಿತರ ಕಾರಣಗಳಿಂದ ಕೊರೊನಾ ಸೋಂಕಿಗೆ ಬಲಿಯಾಗಿದ್ದ ಶಿಕ್ಷಕರ ಕುಟುಂಬದವರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಅನುಕಂಪದ ನೌಕರಿ ನೀಡಲು ನಿರ್ಧರಿಸಿದೆ.
ಜಿಂದಾಲ್ ಗೆ ನೀಡಿದ್ದ ಭೂಮಿ ವಾಪಸ್; ಸಚಿವ ಸಂಪುಟದಲ್ಲಿ ಮಹತ್ವದ ನಿರ್ಧಾರ
ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಕೊರೊನಾದಿಂದ ಮೃತರಾದ ಶಿಕ್ಷಕರ 130 ಕುಟುಂಬಗಳಿಗೆ ಅನುಕಂಪದ ನೌಕರಿ ನೇಮಕಾತಿ ಪತ್ರವನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ವಿತರಿಸಿದರು.
ವಿಮಾನದಲ್ಲಿ ಚುಂಬಿಸಿಕೊಳ್ತಿದ್ದ ದಂಪತಿಗೆ ಕಂಬಳಿ ನೀಡಿದ ಏರ್ಹೋಸ್ಟೆಸ್
ಈ ಸಂದರ್ಭದಲ್ಲಿ ಮಾತನಾಡಿದ ಶಿಕ್ಷಣ ಸಚಿವರು, ಹಲವು ಶಿಕ್ಷಕರು ಕೊರೊನಾದಿಂದ ಮೃತಪಟ್ಟಿದ್ದಾರೆ. ಇಂತಹ ಕುಟುಂಬಕ್ಕೆ ತಕ್ಷಣ ಸ್ಪಂದಿಸುವ ನಿಟ್ಟಿನಲ್ಲಿ ಅನುಕಂಪದ ನೇಮಕಾತಿ ಮಾಡಿಕೊಳ್ಳಲು ಇಲಾಖೆ ನೀರ್ಧರಿಸಿದೆ ಎಂದರು.