alex Certify ವಿಮಾನದಲ್ಲಿ ಚುಂಬಿಸಿಕೊಳ್ತಿದ್ದ ದಂಪತಿಗೆ ಕಂಬಳಿ ನೀಡಿದ ಏರ್​ಹೋಸ್ಟೆಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನದಲ್ಲಿ ಚುಂಬಿಸಿಕೊಳ್ತಿದ್ದ ದಂಪತಿಗೆ ಕಂಬಳಿ ನೀಡಿದ ಏರ್​ಹೋಸ್ಟೆಸ್

ಪಾಕಿಸ್ತಾನದ ಏರ್​ಬ್ಲೂ ವಿಮಾನದಲ್ಲಿ ಕಿಸ್ಸಿಂಗ್​ ಮಾಡುತ್ತಿದ್ದ ಜೋಡಿಯೊಂದು ಸಿಕ್ಕಿಬಿದ್ದಿದೆ. ಈ ಘಟನೆಯು ದೊಡ್ಡ ಗದ್ದಲವನ್ನೇ ಸೃಷ್ಟಿಸಿದೆ. ವಿಮಾನದಲ್ಲಿದ್ದ ಇನ್ನೊಬ್ಬ ಪ್ರಯಾಣಿಕ ವಿಮಾನಯಾನ ಪ್ರಾಧಿಕಾರಕ್ಕೆ ಅಧಿಕೃತ ದೂರನ್ನ ನೀಡಿದ್ದಾರೆ. ಮೇ 20ರಂದು ಕರಾಚಿ ಟು ಇಸ್ಲಾಮಾಬಾದ್​ ವಿಮಾನದಲ್ಲಿ ಈ ಘಟನೆ ಸಂಭವಿಸಿದೆ.

ಅನಾರೋಗ್ಯಕ್ಕೀಡಾದ ಆರೋಗ್ಯ ಸಚಿವ ಡಾ. ಸುಧಾಕರ್

ವಿಮಾನದ ನಾಲ್ಕನೇ ಸಾಲಿನ ಸೀಟಿನಲ್ಲಿ ಕುಳಿತಿದ್ದ ದಂಪತಿ ಸಾರ್ವಜನಿಕವಾಗಿ ಚುಂಬಿಸಿಕೊಳ್ಳಲು ಆರಂಭಿಸಿದ್ದಾರೆ ಎಂದು ಪ್ರಯಾಣಿಕರು ದೂರಿದ್ದಾರೆ. ಕೂಡಲೇ ವಿಮಾನಯಾನ ಸಿಬ್ಬಂದಿ ಸಾರ್ವಜನಿಕ ಸ್ಥಳದಲ್ಲಿ ಈ‌ ರೀತಿ ಅಸಭ್ಯ ವರ್ತನೆ ತೋರದಂತೆ ಮನವಿ ಮಾಡಿದ್ದರು. ಆದರೂ ಸಹ ದಂಪತಿ ಚುಂಬಿಸೋದನ್ನ ನಿಲ್ಲಿಸಿಲ್ಲ. ಇದಾದ ಬಳಿಕ ಏರ್​ಹೋಸ್ಟೆಸ್​ ಇವರು ಚುಂಬಿಸಿಕೊಳ್ಳೋದು ಯಾರಿಗೂ ಕಾಣದಂತೆ ಮಾಡಲು ಅವರಿಗೆ ಕಂಬಳಿಯನ್ನ ಹೊದಿಸಿದ್ದಾರೆ…!

ನನ್ನನ್ನ ಬಂಧಿಸೋಕೆ ಯಾರಪ್ಪನಿಂದಲೂ ಸಾಧ್ಯವಿಲ್ಲ: ನೆಟ್ಟಿಗರಿಗೆ ಸವಾಲೆಸೆದ ಬಾಬಾ ರಾಮ್​ದೇವ್​​

ತಾವು ಮಾಡಿದ್ದೇ ಸರಿ ಎಂಬ ಅಭಿಪ್ರಾಯ ಹೊಂದಿದ್ದ ದಂಪತಿ ನಮಗೆ ಚುಂಬಿಸಬೇಡಿ ಎಂದು ಹೇಳೋದಕ್ಕೆ ನೀವ್ಯಾರು ಅಂತಾ ಪ್ರಯಾಣಿಕರನ್ನ ಪ್ರಶ್ನೆ ಮಾಡಿದ್ದರಂತೆ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವಕೀಲ ಬಿಲಾಲ್​ ಫಾರೂಕ್​ ಅಲಿ ಈ ಸಂಬಂಧ ದೂರನ್ನ ನೀಡಿದ್ದು ದಂಪತಿ ಅಸಭ್ಯ ವರ್ತನೆ ವಿರುದ್ಧ ಕ್ರಮ ಕೈಗೊಳ್ಳದ ಸಿಬ್ಬಂದಿ ವಿರುದ್ಧ ಆರೋಪ ಮಾಡಿದ್ದಾರೆ.ಈ ಸಂಬಂಧ ವಿಮಾನಯಾನ ಇಲಾಖೆ ತನಿಖೆಯನ್ನ ಮುಂದುವರಿಸಿದೆ.

— Naila Inayat (@nailainayat) May 25, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...