alex Certify BIG NEWS: ಒಂದು ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ; ಹೊಸ ವರ್ಷದ ವೇಳೆ ಮಾರಾಟಕ್ಕೆ ನಡೆದಿತ್ತು ಸಿದ್ಧತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಒಂದು ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ; ಹೊಸ ವರ್ಷದ ವೇಳೆ ಮಾರಾಟಕ್ಕೆ ನಡೆದಿತ್ತು ಸಿದ್ಧತೆ

ಬೆಂಗಳೂರು: ಡ್ರಗ್ಸ್ ಜಾಲದ ವಿರುದ್ಧ ಸಮರ ಮುಂದುವರೆಸಿರುವ ಸಿಸಿಬಿ ಪೊಲೀಸರು ನಾಲ್ವರು ಕುಖ್ಯಾತ ಅಂತರಾಜ್ಯ ಡ್ರಗ್ಸ್ ಪೆಡ್ಲರ್ ಗಳನ್ನು ಬಂಧಿಸಿದ್ದು, ಬರೋಬ್ಬರಿ 1 ಕೋಟಿ 15 ಲಕ್ಷ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ.

ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಚೌಡೇಶ್ವರಿ ನಿಲಯ ನಿವಾಸದ ಮೇಲೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು ನಾಲ್ವರು, ಪೆಡ್ಲರ್ ಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ತಿರುಪಾಲ್ ರೆಡ್ಡಿ (32), ಕಮಲೇಶನ್ ಬಿನ್ (31), ಸತೀಶ್ ಕುಮಾರ್ (27), ಏಜಾಜ್ ಪಾಷಾ (45) ಎಂದು ಗುರುತಿಸಲಾಗಿದೆ.

ಬಂಧಿತರಿಂದ 1 ಕೋಟಿ 15 ಲಕ್ಷ ಮೌಲ್ಯದ 5 ಕೆಜಿ 600 ಗ್ರಾಂ ತೂಕದ ಹ್ಯಾಶಿಶ್, 3 ಕೆಜಿ 300 ಗ್ರಾಂ ಗಾಂಜಾ, 1 ಕಾರು, 1 ದ್ವಿಚಕ್ರವಾಹನ, 4 ಮೊಬೈಲ್ ಜಪ್ತಿ ಮಾಡಲಾಗಿದೆ. ಹೊಸ ವರ್ಷದ ವೇಳೆ ಈ ಡ್ರಗ್ಸ್ ಗಳನ್ನು ಮಾರಾಟ ಮಾಡಲು ಸಿದ್ಧತೆ ನಡೆಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...