ಮಂಡ್ಯ: ಮಗಳು ಆನ್ ಲೈನ್ ಶಿಕ್ಷಣಕ್ಕಾಗಿ ಅಪ್ಪನ ಮೊಬೈಲ್ ಪಡೆದುಕೊಂಡಿದ್ದ ವೇಳೆ ಅಪ್ಪನ ರಾಸಲೀಲೆಯ ಕರ್ಮಕಾಂಡ ಮೊಬೈಲ್ ನಲ್ಲಿ ಪತ್ತೆಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬಿಂಡಿಗೆನವಲಿ ಗ್ರಾಮದಲ್ಲಿ ನಡೆದಿದೆ.
ಮಗಳು ತನ್ನ ಆನ್ ಲೈನ್ ಕ್ಲಾಸ್ ಗಾಗಿ ಅಪ್ಪನ ಮೊಬೈಲ್ ಪಡೆದುಕೊಂಡಿದ್ದಾಳೆ. ಈ ವೇಳೆ ಮೊಬೈಲ್ ಗ್ಯಾಲರಿಯಲ್ಲಿ ಅಪ್ಪನ ಲವ್ವಿಡವ್ವಿ ವಿಡಿಯೋ ಬಯಲಾಗಿದೆ. ಇದನ್ನು ನೋಡಿ ಶಾಕ್ ಆದ ಮಗಳು ಅಮ್ಮನಿಗೆ ತೋರಿಸಿದ್ದಾಳೆ.
ಪತಿಯ ವಿರುದ್ಧ ಸಿಡಿದೆದ್ದ ಪತ್ನಿ ಇದೀಗ ನಾಗಮಂಗಲ ಮಹಿಳಾ ಸಾಂತ್ವನ ಕೇಂದ್ರದ ಮೆಟ್ಟಿಲೇರಿದ್ದು, ತನಗೆ ನ್ಯಾಯ ಕೊಡಿಸುವಂತೆ ಕೋರಿದ್ದಾಳೆ.