
ಉಡುಪಿಯಲ್ಲಿ ಇಂದು ಅತ್ಯಧಿಕ ಅಂದರೆ 204 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಕಲಬುರಗಿ 42, ಬೆಂಗಳೂರು 10, ಯಾದಗಿರಿ 74, ಮಂಡ್ಯ 13, ಬೆಳಗಾವಿ 36, ಬೀದರ್ 39, ವಿಜಯಪುರ 53, ಹಾಸನ 3, ಚಿಕ್ಕಬಳ್ಳಾಪುರ 3, ದಕ್ಷಿಣ ಕನ್ನಡ 8, ಉತ್ತರ ಕನ್ನಡ 7, ಬೆಂಗಳೂರು ಗ್ರಾಮಾಂತರ 12, ಹಾವೇರಿ 2, ಧಾರವಾಡ 3, ದಾವಣಗೆರೆ 1, ಬಳ್ಳಾರಿ 1, ಕೋಲಾರ 1 ಹಾಗೂ ರಾಮನಗರದಲ್ಲಿ 2 ಪ್ರಕರಣಗಳು ಪತ್ತೆಯಾಗಿವೆ.
ಲಾಕ್ ಡೌನ್ ಸಡಿಲಿಕೆಯಾದ ಬಳಿಕ ರಾಜ್ಯದಲ್ಲಿ ಕೊರೊನಾ ಸೋಂಕು ದಿನೇ ದಿನೇ ಏರಿಕೆಯಾಗುತ್ತಿದ್ದು, ಇಂದು ವರದಿಯಾಗಿರುವ 515 ಪ್ರಕರಣಗಳು ಈವರೆಗಿನ ಅತ್ಯಧಿಕ ಸಂಖ್ಯೆಯಾಗಿದೆ. ಗಮನಾರ್ಹ ಸಂಗತಿಯೆಂದರೆ ಈವರೆಗೆ ಪತ್ತೆಯಾದ ಸೋಂಕಿತರ ಪೈಕಿ ಮಹಾರಾಷ್ಟ್ರದಿಂದ ಬಂದವರೇ ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ.