alex Certify ಕೋವಿಡ್ ಎಂದು ಆಸ್ಪತ್ರೆಗೆ ದಾಖಲಾದ ಒಂದೇ ದಿನಕ್ಕೆ ಕೊನೆಯುಸಿರೆಳೆದ ಮಹಿಳೆ: ಬಿಲ್ ಎಷ್ಟಾಗಿತ್ತು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್ ಎಂದು ಆಸ್ಪತ್ರೆಗೆ ದಾಖಲಾದ ಒಂದೇ ದಿನಕ್ಕೆ ಕೊನೆಯುಸಿರೆಳೆದ ಮಹಿಳೆ: ಬಿಲ್ ಎಷ್ಟಾಗಿತ್ತು ಗೊತ್ತಾ….?

ಕೋವಿಡ್-19 ಸೋಂಕಿಗೆ ತುತ್ತಾದ 38 ವರ್ಷದ ಮಹಿಳೆಯೊಬ್ಬರು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಮಾರನೇ ದಿನವೇ ಮೃತಪಟ್ಟಿದ್ದಾರೆ. ಆಕೆಯ ಅಗಲಿಕೆಯ ನೋವಿನಲ್ಲಿದ್ದ ಕುಟುಂಬಕ್ಕೆ ಮತ್ತೊಂದು ಬರೆಯ ರೂಪದಲ್ಲಿ ಮೂರು ಲಕ್ಷಗಳ ಆಸ್ಪತ್ರೆ ಬಿಲ್ ಬಂದಿದೆ.

ಆರ್‌.ಟಿ. ನಗರದ ಮಹಿಳೆಗೆ ಕೆಮ್ಮು ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡ ಬೆನ್ನಿಗೇ, ಸೋಮವಾರದಂದು ಆಕೆಯನ್ನು ಅಸ್ಟೆರ್‌ ಸಿಎಂಐ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚೇತರಿಕೆ ಕಾಣದ ಆಕೆ ಮಂಗಳವಾದ ನಿಧನರಾಗಿದ್ದಾರೆ. ಇಷ್ಟರಲ್ಲಾಗಲೇ ಮೂರು ಲಕ್ಷ ರೂ.ಗಳ ಬಿಲ್‌ ಅನ್ನು ಆಸ್ಪತ್ರೆ ಆಕೆಯ ಕುಟುಂಬದ ಮೇಲೆ ಜಡಿದಿದೆ.

ಬರೋಬ್ಬರಿ 70.28 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ ವಶಕ್ಕೆ

ಶಾಕ್‌ನಲ್ಲಿದ್ದ ಕುಟುಂಬ ಮರ್ಸಿ ಮಿಷನ್‌‌ ಕಾರ್ಯಕರ್ತರನ್ನು ಭೇಟಿಯಾಗಿದ್ದು, ಸುವರ್ಣ ಆರೋಗ್ಯ ಟ್ರಸ್ಟ್ ‌‌ಅನ್ನು ಸಂಪರ್ಕಿಸಿದೆ. ಇಬ್ಬರು ಐಎಎಸ್ ಅಧಿಕಾರಿಗಳು ಮಧ್ಯಪ್ರವೇಶಿಸಿದ ಬಳಿಕ ಬಿಲ್‌ ಅನ್ನು 89,000 ರೂ.ಗಳಿಗೆ ಇಳಿಸಲಾಗಿದೆ. ಈ ಸಂಬಂಧ ಬುಧವಾರ ಮಧ್ಯರಾತ್ರಿ 2 ಗಂಟೆವರೆಗೂ ಚರ್ಚೆ ನಡೆದಿದೆ.

“ಮಹಿಳೆಗೆ ಕೋವಿಡ್-19 ನ್ಯೂಮೋನಿಯಾ ಇದೆ ಎಂದು ಆಸ್ಪತ್ರೆ ದಾಖಲೆಗಳು ತೋರುತ್ತಿವೆ. ಆಕೆಗೆ ಕಿಡ್ನಿ ಹಾಗೂ ಹೆಪಟಾಟಿಸ್ ಇದೆ ಎಂದೂ ಹೇಳಲಾಗಿದೆ. ಈ ಪ್ರಕರಣದಲ್ಲಿ ಸರ್ಕಾರದ ಗಮನಕ್ಕೆ ವಿಚಾರ ತಂದ ಬಳಿಕ ಆಸ್ಪತ್ರೆಯು ಬಿಲ್‌ ಮೊತ್ತವನ್ನು ತಗ್ಗಿಸಿದೆ. ಬಳಸಿಯೇ ಇಲ್ಲದ ಮದ್ದುಗಳನ್ನೂ ಸಹ ಬಿಲ್‌ನಲ್ಲಿ ನಮೂದಿಸಿದ ಆಸ್ಪತ್ರೆ ಅವಕ್ಕೂ ಚಾರ್ಜ್ ಮಾಡಿತ್ತು” ಎಂದು ಮರ್ಸಿ ಏಂಜೆಲ್ಸ್‌ನ ಮೊಹಮ್ಮದ್ ಇಸ್ಮಾಯಿಲ್ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...